ಹೊಸಪೇಟೆ: ಕಳ್ಳನಿಂದ 5 ಬೈಕ್ ವಶ
ಹೊಸಪೇಟೆ: ಬೈಕ್ ಕಳ್ಳನಿಂದ ಸುಮಾರು ರು. 1.5 ಲಕ್ಷ ಮೌಲ್ಯದ 5 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಡಿ.ಡಿ. ಮಾಳಗಿ ತಿಳಿಸಿದರು. ನಗರದ ಬಡಾವಣೆ ಠಾಣೆಯಲ್ಲಿ ಗುರುವಾರ ಮಾತನಾಡಿ, ಹೊಸಪೇಟೆ ನಿವಾಸಿ ವಡ್ಡು ಗ್ರಾಮದ ಜಿಂದಾಲ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಜಿಲಾನ್ ಶೇಖ್ (49) ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ನಗರದ ಎಪಿಎಂಸಿ ಆವರಣದ ಸಮೀಪದಲ್ಲಿ ಅನುಮಾನಾಸ್ಪದವಾಗಿ ಬೈಕ್ನಲ್ಲಿ ನಿಂತಿದ್ದನ್ನು ಗಮನಿಸಿ ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ. ಜಿಲಾನ್ ಶೇಖ್ನಿಂದ 5 ಬೈಕ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಸಿಪಿಐ ಪ್ರಹ್ಲಾದ್, ಪಿಎಸ್ಐಗಳಾದ ಜುವಿಯರ್, ಚಿದಾನಂದ ಎಂ. ಗದಗ, ಎಎಸ್ಐ ಜಡಿಯಪ್ಪ ಸೇರಿದಂತೆ ಇತರೆ ಪೊಲೀಸರು ದಾಳಿಯಲ್ಲಿ ಭಾಗವಹಿಸಿದ್ದರು.