ಎಎನ್ಆರ್, ಹಳಿಬಂಡಿಗೆ ಶ್ರದ್ಧಾಂಜಲಿ
ಬಳ್ಳಾರಿ: ತೆಲುಗು ಚಿತ್ರರಂಗದ ಹಿರಿಯ ನಟ ಅಕ್ಕಿನೇನಿ ನಾಗೇಶ್ವರರಾವ್ ಹಾಗೂ ಕರ್ನಾಟಕ ಕಲಾಶ್ರೀ, ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಯಶವಂತ್ ಹಳಿಬಂಡಿ ಅವರಿಗೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಶ್ರದ್ಧಾಂಜಲಿ ಸಲ್ಲಿಸಿತು. ಸಂಸ್ಥೆಯ ಅಧ್ಯಕ್ಷ ಬಿ. ಸಿದ್ಧನಗೌಡ, ಗೌರವಾಧ್ಯಕ್ಷ ಕೆ. ಚನ್ನಪ್ಪ ಹಾಗೂ ಪದಾಧಿಕಾರಿಗಳಾದ ಕೆ. ರಾಮಾಂಜನೆಯಲು, ಚೆಲ್ಲಾ ಅಮೇರೆಂದ್ರನಾಥ್, ಚೌಧರಿ, ರಮೇಶ್ಗೌಡ ಪಾಟೀಲ್, ಪಿ. ಧನುಂಜಯ, ಕೆ. ಪಂಪನಗೌಡ ಇದ್ದರು. ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ವತಿಯಿಂದಲೂ ಸಂತಾಪ ಸೂಚಿಸಲಾಯಿತು. ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಶಿಲಾ ಬ್ರಹ್ಮಯ್ಯ, ಕೆ. ಕೋಟೇಶ್ವರರಾವ್, ಪಿ. ಗಾದೆಪ್ಪ, ಅಲ್ಲಂ ದೊಡ್ಡಪ್ಪ, ಎಚ್.ಎಸ್. ರಾಘವೇಂದ್ರ ಅರಸ್ ಹಾಗೂ ಸದಸ್ಯರು ಇದ್ದರು.