ಜೈವಿಕ ತ್ಯಾಜ್ಯ ವಿಲೇವಾರಿ ಕುರಿತು ತರಬೇತಿ ಕಾರ್ಯಾಗಾರ
ಬಳ್ಳಾರಿ: ಸ್ಥಳೀಯ ವಿಮ್ಸ್ ಶಿಕ್ಷಕರ ಭವನದಲ್ಲಿ ಜೈವಿಕ ತ್ಯಾಜ್ಯ ವಿಲೇವಾರಿ ಕುರಿತ ತರಬೇತಿ ಕಾರ್ಯಾಗಾರ ಈಚೆಗೆ ಜರುಗಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಕಚೇರಿಯ ಗೋಪಾಲಕೃಷ್ಣ ಉದ್ಘಾಟಿಸಿ ಮಾತನಾಡಿ, ನಗರಗಳು ಬೆಳೆದಂತೆ ತ್ಯಾಜ್ಯ ಮಿತಿ ಮೀರಿ ಸಂಗ್ರಹವಾಗಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ನಾನಾ ಕಾಯಿಲೆಗಳು ಹರಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದರು. ಜಿಲ್ಲಾ ಆರ್ಸಿಎಚ್ ಡಾ. ಅನಿಲ್, ವಿಮ್ಸ್ ಪ್ರಾಚಾರ್ಯ ಡಾ. ಚೆನ್ನಣ್ಣ, ವೈದ್ಯಕೀಯ ಆಸ್ಪತ್ರೆ ಅಧೀಕ್ಷಕ ಡಾ. ಶ್ರೀನಿವಾಸುಲು, ಡಾ. ಎಸ್. ಬಸವರಾಜ, ನೋಡಲ್ ಅಧಿಕಾರಿ ಡಾ. ಹೇಮಗಿರಿ, ವಿಮ್ಸ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು, ವೈದ್ಯಾಧಿಕಾರಿಗಳು, ಖಾಸಗಿ ವೈದ್ಯರಿದ್ದರು.