ಬಳ್ಳಾರಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
ಬಳ್ಳಾರಿ: ಜಿಲ್ಲಾ ಸಂಚಾರಿ ಪೊಲೀಸ್, ಶ್ರೀನಂದ ವಸತಿ ಶಾಲೆಯಿಂದ ನಗರದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ರಸ್ತೆ ಸುರಕ್ಷತೆಗೆ ಸಂಬಂಧಪಟ್ಟ ನಾಮಫಲಕಗಳನ್ನು ಹಿಡಿದ ನೂರಾರು ಶಾಲಾ ಮಕ್ಕಳು ನಗರದ ಮೋತಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು. ವೇಗದ ಮಿತಿ, ವಾಹನಗಳ ಪಾರ್ಕಿಂಗ್, ಪುಟ್ಬೋರ್ಡ್ ಪ್ರಯಾಣ ಅಪಾಯದ ತೊಟ್ಟಿಲು, ಶಾಲಾ ವಲಯ, ಆಸ್ಪತ್ರೆಗಳ ಸಮೀಪ ಅತಿವೇಗ, ಹಾರ್ನ್ ಬಳಕೆ ನಿಷೇಧ, ಚಾಲನೆ ವೇಳೆ ಮೊಬೈಲ್ ಬಳಕೆ, ಮದ್ಯ ಸೇವಿಸಿ ಚಾಲನೆ ನಿಷೇಧ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಮುಖ್ಯಗುರು ವಂಶಿ, ಪೊಲೀಸ್ ಇಲಾಖೆ ಅಧಿಕಾರಿಗಳು ಇತರರಿದ್ದರು.