ಬಳ್ಳಾರಿ: ವಿಜ್ಞಾನವಸ್ತುಪ್ರದರ್ಶನ
ಬಳ್ಳಾರಿ: ನಗರದ ನಾರಾಯಣ ಇ-ಟೆಕ್ನೊ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ಸೈನ್ಸ್ ಕ್ರಾಪ್ಟ್ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ತರಗತಿವಿಜ್ಞಾನಕ್ಕೆ ಸಂಬಂಧಿಸಿದಂತೆ ನಡೆದ ವಿಜ್ಞಾನ ವಸ್ತುಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಟಚ್ ಫಾರ್ ಲೈಫ್ ಫೌಂಡೇಶನ್ ಸಂಸ್ಥಾಪಕ ನಾರಾ ಭರತರೆಡ್ಡಿ ಚಾಲನೆ ನೀಡಿ ಮಾತನಾಡಿ, ಶಾಲಾ ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳು ಬಹುಪಯೋಗಿ. ಇಲ್ಲಿ ಪ್ರದರ್ಶನಗೊಂಡ ಮಾದರಿಗಳ ಕುರಿತು ವಿದ್ಯಾರ್ಥಿಗಳು ಸರಿಯಾದ ಮಾಹಿತಿ ಪಡೆಯಿರಿ ಎಂದರು. ಡಾ. ಶಶಿಧರರೆಡ್ಡಿ, ಶಾಲೆಯ ಮುಖ್ಯಗುರುಗಳು, ವಿದ್ಯಾರ್ಥಿಗಳು ಇದ್ದರು. ಪ್ರದರ್ಶನದಲ್ಲಿ ಇದ್ದ ವಿಜ್ಞಾನದ ವಿವಿಧ ಮಾದರಿಗಳು ಎಲ್ಲರ ಗಮನ ಸೆಳೆದವು.