ಬೇಡಿಕೆ ಈಡೇರಿಕೆಗಾಗಿ 30ಕ್ಕೆ ಸಿಪಿಎಂ ಪ್ರತಿಭಟನೆ
ಹೊಸಪೇಟೆ: ಉದ್ಯೋಗ, ಶಿಕ್ಷಣ ಆರ್ಥಿಕ ಮೂಲ ಸೌಲಭ್ಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಪಿಎಂ ತಾಲೂಕು ಸಮಿತಿಯಿಂದ ನಗರದಲ್ಲಿ ಜ. 30ರಂದು ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಕಾರ್ಯದರ್ಶಿ ಆರ್. ಭಾಸ್ಕರರೆಡ್ಡಿ ತಿಳಿಸಿದರು. ಸಂವಿಧಾನ ಮೀಸಲಾತಿ ವ್ಯವಸ್ಥೆ ನಾಶಪಡಿಸುವ ಖಾಸಗೀಕರಣ ಜಾಗತೀಕರಣ, ಉದಾರೀಕರಣ ನೀತಿಗಳನ್ನು ಜಾರಿಗೆ ತರುತ್ತಿರುವ ಕಾಂಗ್ರೆಸ್, ಬಿಜೆಪಿ ನೇತೃತ್ವದ ಸರ್ಕಾರಗಳು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳನ್ನು ವಂಚಿಸುತ್ತ ಬಂದಿವೆ. ರಾಜ್ಯ ಸರ್ಕಾರ 20 ವರ್ಷಗಳಿಂದ ಎಸ್ಟಿ ಸಮುದಾಯಕ್ಕೆ ನೀಡಬೇಕಾದ ಶೇ. 7.5ರಷ್ಟು ಮೀಸಲಾತಿಯನ್ನು ನೀಡದಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.