ಶೌಚಾಲಯದ ಕಾಮಗಾರಿ ಪೂರ್ಣ: ಕವಿತಾ ಈಶ್ವರ್ಸಿಂಗ್
ಹೊಸಪೇಟೆ: ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಿ, ತೆರೆಯಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕವಿತಾ ಈಶ್ವರ್ಸಿಂಗ್ ಹೇಳಿದರು. ನಗರದ ಸಂಕ್ಲಾಪುರದಲ್ಲಿ ಶೌಚಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶಾಸಕ ಆನಂದ್ಸಿಂಗ್ ಈ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದರು. ಕಾಮಗಾರಿ ಅಪೂರ್ಣಗೊಂಡಿದ್ದನ್ನು ಸಂಕ್ಲಾಪುರ ತಾಯಮ್ಮ ಶಕ್ತಿ ಸಂಘದ ಸದಸ್ಯರು ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ನಗರಸಭೆ ನೆರವಿನಿಂದ ವಿದ್ಯುತ್, ನೀರಿನ ವ್ಯವಸ್ಥೆ ಕಲ್ಪಿಸಿದೆ ಎಂದರು. ಸಂದೀಪ್ ಸಿಂಗ್, ಕಿಷನ್ ಸಿಂಗ್, ನಗರಸಭೆ ಸದಸ್ಯ ರೂಪೇಶ್ಕುಮಾರ್, ಅಂಕ್ಲೆಪ್ಪ, ಪ್ರಾಚಾರ್ಯ ರಂಗಪ್ಪ, ಮಹ್ಮದ್ ಮನ್ಸೂರ್, ಗ್ರಾಮಸ್ಥರಿದ್ದರು.