ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹೂವಿನಹಡಗಲಿ: ಉಚಿತತರಬೇತಿ ಕಾರ್ಯಾಗಾರ

Mainashree
Updated On : 26 Jan 2014, 11:22 am

ಹೂವಿನಹಡಗಲಿ: ಇಲ್ಲಿನ ಶಿವ ಶಾಂತವೀರ ಸಮುದಾಯ ಭವನದಲ್ಲಿ ಶಾಂತಿ ನಿಕೇತನ ಕರಿಯರ್ ಅಕಾಡೆಮಿಯು ಪ್ರೌಢ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಾಗೂ ಎಲ್ಲ ನೇಮಕಾತಿಗಾಗಿ ಉಚಿತ ಅಭ್ಯಾಸ ಮಾರ್ಗದರ್ಶನ ಕಾರ್ಯಾಗಾರ ಆಯೋಜಿಸಿತ್ತು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ವಿರೂಪಾಕ್ಷಗೌಡ, ಗ್ರಾಮೀಣ ಭಾಗದಲ್ಲಿ ಶಾಂತಿ ನಿಕೇತನ ಕೆರಿಯರ್ ಅಕಾಡೆಮಿಯಿಂದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದರು. ಉಪನ್ಯಾಸಕ ಜಗದೀಶ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಲ್ಲದೆ ಸಾಧನೆ ಮೆಟ್ಟಲೇರಲು ಸಾಧ್ಯವಿಲ್ಲ. ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಉತ್ತಮ ದಾರಿ ಕಂಡುಕೊಳ್ಳಬೇಕೆಂದರು. ಉಪನ್ಯಾಸಕ ಎನ್. ವರಕುಮಾರಗೌಡ, ಕೆ. ವೆಂಕಟೇಶ, ಶಾಂತಮೂರ್ತಿ ಕುಲಕರ್ಣಿ, ಪ್ರಭು ಸೊಪ್ಪಿನ, ವೀರಭದ್ರಪ್ಪ ಕೂಡ್ಲಿಗಿ, ಮೋಹನ್‌ಗಾಂಧಿ, ಶಂಕರ್ ಬೆಟಗೇರಿ ಇದ್ದರು. ವಿವಿಧ ಗ್ರಾಮದ 250 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement