ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

31ರಿಂದ ರೋಟರಿ ಕ್ಲಬ್ ಸಮ್ಮೇಳನ

Vishwanath S
Updated On : 29 Jan 2014, 11:06 am

ಹೊಸಪೇಟೆ: ರೋಟರಿ ಕ್ಲಬ್ ಜಿಲ್ಲಾ ಸಮ್ಮೇಳನ ಜ. 31ರಿಂದ ಫೆ. 2ರ ವರೆಗೆ ಹೊಸಪೇಟೆಯಲ್ಲಿ ನಡೆಯಲಿದೆ ಎಂದು ಡಿಸ್ಟ್ರಿಕ್ಟ್ ರೋಟರಿ ಗವರ್ನರ್ ಆರ್. ಗೋಪಿನಾಥ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜ. 31ರಂದು ಸಮ್ಮೇಳನ ಉದ್ಘಾಟನೆ ನಡೆಯಲಿದೆ. ಬೆಂಗಳೂರಿನ ಪ್ರಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸ್ವಾಮಿ ಸುಖಬೋಧಾನಂದ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜೆಎಸ್‌ಡಬ್ಲ್ಯೂ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿನೋದ ನಾವೆಲ್, ರೋಟರಿಯನ್ ಬರ್ಟನ್ ಮತ್ತು ಜೆಟ್ಟಿ ಬರ್ಟನ್, ಬಿಲ್ ಚೆನ್ ಮತ್ತು ಜೋನ್ ಚೆನ್ ಹಾಗೂ ರೋಟರಿ ಗವರ್ನರ್ ಆರ್. ಗೋಪಿನಾಥ ಭಾಗವಹಿಸುವರು. ಮೂರು ದಿನಗಳ ಸಮ್ಮೇಳನದಲ್ಲಿ 1,500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರೋಟರಿ ಡಿಸ್ಟ್ರಿಕ್ಟ್‌ನಲ್ಲಿ ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಹಾಗೂ ಆಂಧ್ರ ಪ್ರದೇಶದ ಅನಂತಪುರ, ಕರ್ನೂಲ್, ಕಡಪ, ನೆಲ್ಲೂರು ಜಿಲ್ಲೆಗಳು ಸೇರುತ್ತಿದ್ದು, ರಾಜ್ಯ ಹಾಗೂ ಆಂಧ್ರಪ್ರದೇಶದಿಂದಲೂ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಸಮ್ಮೇಳನದ ಉಸ್ತುವಾರಿ ಚೇರ್‌ಮನ್ ವಿ. ತಿರುಪತಿ ನಾಯ್ಡು ಮಾತನಾಡಿ, ಸಮ್ಮೇಳನ ಯಶಸ್ವಿಗೊಳಿಸಲು ವಿವಿಧ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದರು. ರೋಟರಿ ಡಿಸ್ಟ್ರಿಕ್ಟ್ ಜನರಲ್ ಸೆಕ್ರೆಟರಿ ಚಂದ್ರಶೇಖರ ಪಿ.ಜಿ. ಮಾತನಾಡಿ, ಪೋಲಿಯೋ ನಿರ್ಮೂಲನೆ ಗುರಿ ಹೊಂದಿದ್ದ ರೋಟರಿ ಆಶಯ, ಗುರಿ ಪೂರ್ಣಗೊಂಡಿದೆ. ಜಗತ್ತಿನ ಎಲ್ಲ ದೇಶಗಳಲ್ಲಿ ಪೋಲಿಯೋ ನಿರ್ಮೂಲನೆಯಾಗಿದೆ. ಕೆಲವು ಬೆರಳಣಿಕೆ ರಾಷ್ಟ್ರಗಳಲ್ಲಿ ಮಾತ್ರ ಇದೆ. ಅದನ್ನು ಪೂರ್ಣಗೊಳಿಸಲಾಗುವುದು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ ರಾವ್, ಕಾರ್ಯದರ್ಶಿ ಸಯ್ಯದ್ ಮಹ್ಮದ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಎನ್.ಎಂ. ಅಗ್ನಿಹೋತ್ರಿ, ಖಜಾಂಚಿ ವಿಜಯ್ ಎಂ. ಸಿಂದಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement