ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರೇಲ್ವೆ ಪ್ರಯಾಣಿಕರಿಗೆ ಮೂಲ ಸೌಕರ್ಯ: ಸ್ವಾಮಿ

Vishwanath S
Updated On : 29 Jan 2014, 11:05 am

ಹೊಸಪೇಟೆ: ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಹಾಗೂ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ಭಾರತೀಯ ರೇಲ್ವೆ ಮಂಡಳಿಯ ಪ್ರಯಾಣಿಕರ ಮೂಲ ಸೌಕರ್ಯ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಚಲುವಾದಿ ನಾರಾಯಣ ಸ್ವಾಮಿ ಹೇಳಿದರು.
ನಗರದ ರೇಲ್ವೆ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಟಿಕೆಟ್ ನೀಡುವ ಕ್ರಮ, ಅಸನ ವ್ಯವಸ್ಥೆ ಮತ್ತಿತರ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ರೇಲ್ವೆ ನಿಲ್ದಾಣದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ನಿಲ್ದಾಣವನ್ನು ಸುಂದರಿಕರಣಗೊಳಿಸುವ ರೀತಿ ಅಭಿವೃದ್ಧಿ ಪಡಿಸಲಾಗುವುದು. ನಿಲ್ದಾಣದಲ್ಲಿನ ಖಾಲಿ ಪ್ರದೇಶದಲ್ಲಿ ಗಿಡ,  ಮರಗಳನ್ನು ಬೆಳೆಸುವ ಯೋಜನೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಪರಿಸರ ಪ್ರೇಮಿ ಸುರೇಶ್ ಹುಬ್ಳಿಕರ್ ಸಹಯೋಗ ನೀಡಿದ್ದಾರೆ. ಇದರಿಂದ ಪರಿಸರ ಪ್ರಜ್ಞೆ ಬೆಳೆಯುವ ಜತೆಗೆ ರೇಲ್ವೆ ಇಲಾಖೆಯ ಜಾಗದ ಅತಿಕ್ರಮಣ ತಡೆಯಬಹುದಾಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾದಾಗಿನಿಂದ ಕರ್ನಾಟಕದ ನೆನೆಗುದಿಗೆ ಬಿದ್ದ ರೇಲ್ವೆ ಯೋಜನೆಗಳೆಲ್ಲ ಈಗ ಕಾರ್ಯಾರಂಭಗೊಂಡಿವೆ. ಅವರ ಅಧಿಕಾರವಧಿಯಲ್ಲಿ ಇನ್ನು ಉತ್ತಮ ಕೆಲಸಗಳು ನಡೆಯಲಿವೆ. ಭಾರತೀಯ ರೇಲ್ವೆ ಮಂಡಳಿಯ ಪ್ರಯಾಣಿಕರ ಮೂಲ ಸೌಕರ್ಯ ಸಮಿತಿ ಅಧ್ಯಕ್ಷನಾಗಿ ಕಾರ್ಯವಹಿಸಿಕೊಂಡಾಗಿನಿಂದ ಪ್ರವಾಸದಲ್ಲಿರುವೆ. ಈಗಾಗಲೆ 16 ರಾಜ್ಯಗಳ ರೇಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿರುವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ದೀಪಕ್‌ಕುಮಾರ್ ಸಿಂಗ್, ಸುಧಾಕರ ಹಿರೇಮಠ, ಹೆಗ್ಡಾಳ್ ರಾಮಣ್ಣ, ನಿಂಬಗಲ್ ರಾಮಕೃಷ್ಣ, ಮರಿದಾಸ್, ನಾಗೇಶ್ವರ ರಾವ್, ಮರಿಸ್ವಾಮಿ, ವೀರಭದ್ರ, ನಗರಸಭೆ ಸದಸ್ಯ ಆಂಜನೇಯಲು, ಕಂಪ್ಲಿ ಪುರಸಭೆ ಸದಸ್ಯ ಸಿ.ಆರ್. ಹನುಮಂತ, ರೇಲ್ವೆ ಹೋರಾಟ ಸಮಿತಿಯ ವೈ. ಯಮುನೇಶ್, ಮಹೇಶ್ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement