ಆರ್.ಎಂ. ಮಹಾಂತಯ್ಯ ಶಾಸ್ತ್ರಿ ನಿಧನ
ಕೊಟ್ಟೂರು: ಕಟ್ಟಿಮನಿ ಹಿರೇಮಠಾಧ್ಯಕ್ಷ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ ಆರ್.ಎಂ. ಮಹಾಂತಯ್ಯ ಶಾಸ್ತ್ರಿ (85) ಬುಧವಾರ ಸಮೀಪದ ರಾಂಪುರ ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದಾರೆ.
ಯೋಗಿರಾಜೇಂದ್ರ ಶಿವಾಚಾರ್ಯರು ಸೇರಿದಂತೆ ಮೂವರು ಪುತ್ರರು, ಐವರು ಪುತ್ರಿಯರು ಶಾಸ್ತ್ರಿಗಳಿಗೆ ಇದ್ದಾರೆ. ವೇದಾದ್ಯಯನ ಪಾಂಡಿತ್ಯದಲ್ಲಿ ಪರಿಣಿತಿ ಪಡೆದಿದ್ದರು.
ರಂಭಾಪುರಿ, ಉಜ್ಜನಿ ಜಗದ್ಗುರುಗಳು ಸೇರಿದಂತೆ ಅನೇಕ ಹರ ಗುರು ಚರ ಮೂರ್ತಿಗಳ ಉಪಸ್ಥಿತಿಯಲ್ಲಿ ಮೃತರ ಅಂತ್ಯಕ್ರಿಯೆ ಜ. 30ರ ಬೆಳಗ್ಗೆ 10.30ಕ್ಕೆ ರಾಂಪುರ ಗ್ರಾಮದಲ್ಲಿ ನಡೆಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.