ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕರಾಟೆ: ಜ್ಞಾನಭಾರತಿ ಶಾಲೆ ಚಾಂಪಿಯನ್

Lingaraj Badiger
Updated On : 31 Jan 2014, 10:53 am

ಕೂಡ್ಲಿಗಿ: ಮೈಸೂರಿನಲ್ಲಿ ನಡೆದ 11ನೇ ಶೋರಿನ್ ಕೈ ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ನ ವೈಯಕ್ತಿಕ ಹಾಗೂ ಫೈಟಿಂಗ್ ಸ್ಪರ್ಧೆಯಲ್ಲಿ ಇಲ್ಲಿನ ಜ್ಞಾನಭಾರತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ರನ್ನರ್ ಅಪ್ ಟ್ರೋಫಿ ಪಡೆದಿದ್ದಾರೆ.
ಋಷಾಂಕ್, ತೇಜೋಮಯಿ, ಗುಪ್ಪಾಲ್ ಸುಧೀಂದ್ರ ಇವರು ರಜತ ಪದಕ ಹಾಗೂ ಷಣ್ಮುಖಿ, ಋತ್ವಿಕ್, ಚಿರಂತನ್, ತೇಜೋಮಯಿ ಕಂಚಿನ ಪದಕ ಮತ್ತು ಬಿ.ಆರ್. ವಿಜಯಕುಮಾರ್, ಯಶಸ್, ಸೂರಜ್ ಇವರು ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕದ ಮೈಸೂರು, ಬೆಂಗಳೂರು, ಪಿರಿಯಾಪಟ್ಟಣ, ಹಾಸನ, ಎಚ್.ಡಿ. ಕೋಟೆ, ನಂಜನಗೂಡಿನಿಂದ ಸುಮಾರು 600 ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದರಿಂದ ವಿದ್ಯಾರ್ಥಿ ಹಾಗೂ ತರಬೇತುದಾರ ಸಂಪೈ ಈಶ್ವರ್ ಇವರ ಸಾಧನೆಗೆ ಸಿದ್ಧಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಆಡಳಿತಾಧಿಕಾರಿ ರಶ್ಮಿ ರವೀಂದ್ರಕುಮಾರ್ ಮತ್ತು ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದೆ.
--
ಮೈನವಿರೇಳಿಸಿದ ಮಲ್ಲಕಂಬ ಕಸರತ್ತು
ಹೊಸಪೇಟೆ: ತಾಲೂಕಿನ ಕಮಲಾಪುರ ವಲಯ ಟಿ.ಸಿ. ಶಾಲೆ, ಎಸ್.ಎಸ್. ಶಾಲೆಯ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಗೆ ಒಳಪಡುವ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪಟ್ಟಣದ ವಾಲ್ಮೀಕಿ ಭವನದ ಮೈದಾನದಲ್ಲಿ ಮಲ್ಲಕಂಬ ಸಾಹಸ ಕ್ರೀಡೆ ಪ್ರದರ್ಶಿಸಲಾಯಿತು. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರಾಮಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 24 ವಿದ್ಯಾರ್ಥಿಗಳು ಮಲ್ಲಕಂಬ, ಹಗ್ಗದಲ್ಲಿ ವಿವಿಧ ಆಸನಗಳನ್ನು, ಕಸರತ್ತುಗಳನ್ನು ಪ್ರದರ್ಶಿಸಿದರು. ಮಲ್ಲಕಂಬ ತರಬೇತುದಾರ ಎಂ.ಐ. ಕಣಗೆ, ಎಸ್‌ಡಿಎಂಸಿ ಅಧ್ಯಕ್ಷ ಕೆ. ವೆಂಕಟೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪದ್ಮನಾಭ ಕರಣಂ, ಡಿ. ಸುಶೀಲಾ, ಎಸ್.ಕೆ. ಹನುಮಂತಪ್ಪ, ಭೋಜರಾಜ, ಶಂಕರ್ ನಾಯ್ಕ, ಚಂದ್ರಶೇಖರ್, ಸಹ ಶಿಕ್ಷಕ ಹಾಲ್ಯನಾಯ್ಕ, ಮುಕ್ತಿಯಾರ್ ಇದ್ದರು.

ಅಪ್ರೆಂಟಿಸ್ ತರಬೇತಿಗೆ ಸಂದರ್ಶನ
ಬಳ್ಳಾರಿ: ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಅಪ್ರೆಂಟಿಸ್ ಫೇರ್ ಕಾರ್ಯಕ್ರಮವನ್ನು ಆಯೋಜಿಸಿ ಬಿಇ ಮತ್ತು ಡಿಪ್ಲೋಮಾ ಹೊಂದಿದವರಿಗೆ ವಿವಿಧ ಉದ್ದಿಮೆಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿ ನೀಡಲು ಸಂದರ್ಶನ ನಡೆಸಲಾಯಿತು. ಚೆನ್ನೈನ ಬೋರ್ಡ್ ಆಫ್ ಅಪ್ರೆಂಟಿಷಿಪ್ ಟ್ರೈನಿಂಗ್ ಸಹಾಯಕ ನಿರ್ದೇಶಕ ಎಂ. ಸುರೇಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚೆನ್ನೈನ ಬೋರ್ಡ್ ಆಫ್ ಅಪ್ರೆಂಟಿಷಿಪ್ ಟ್ರೈನಿಂಗ್ ಹಾಗೂ ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಬಿಎಚ್‌ಇಎಲ್, ನವಕರ್ನಾಟಕ ಸ್ಟೀಲ್ಸ್, ಬೆನಕ ಸ್ಪಾಂಜ್ ಐರನ್ ಕಂಪನಿಗಳು ಭಾಗವಹಿಸಿದ್ದು, ಸುಮಾರು 400ಕ್ಕೂ ಹೆಚ್ಚು ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಬಿಎಚ್‌ಇಎಲ್ ಹಿರಿಯ ಎಚ್‌ಆರ್ ಜಾನ್ ಯ್ಯಾಂಬ್ರೋಸ್, ತಾಂತ್ರಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಸತ್ಯನಾರಾಯಣ ಶೆಟ್ಟಿ, ಪಾಲಿಟೆಕ್ನಿಕ್ ಪ್ರಾಚಾರ್ಯ ಪಿ.ಎಸ್. ಬಾಲಾಂಜನೇಯಲು, ರಿಜಿಸ್ಟ್ರಾರ್ ಎನ್. ಪೆದ್ದಣ್ಣ, ಪ್ಲೇಸ್‌ಮೆಂಟ್ ಆಫೀಸರ್ ಲಕ್ಷ್ಮೀಪುತ್ರ, ಎನ್‌ಬಿಎ ಕೊ ಆರ್ಡಿನೇಟರ್ ಎಚ್. ಸಿದ್ದೇಶ್, ಅಧಿಕಾರಿ, ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement