ಬಳ್ಳಾರಿ

ಅಡಮಾನ ಸಾಲಪತ್ರ ದುರ್ಬಳಕೆ

ಹಗರಿಬೊಮ್ಮನಹಳ್ಳಿ: ಅಡಮಾನ ಸಾಲಕ್ಕಾಗಿ ಬರೆದುಕೊಟ್ಟ ಪತ್ರವನ್ನು ದುರ್ಬಳಕೆ ಮಾಡಿಕೊಂಡು ಅಮಾಯಕ ರೈತ ಮಹಿಳೆಗೆ ಮೋಸ ಮಾಡಿದ ಹಂಪಸಾಗರ ಗ್ರಾಮದ ಬೂದನೂರು ರಮೇಶ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜು. 2ರಿಂದ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘ, ಕರವೇ ಕಾಯಕರ್ತರು ಧರಣಿ ನಡೆಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಜಿ. ಗೋಣಿಬಸಪ್ಪ ಹಾಗೂ ಕರವೇ ಹೊಬಳಿ ಘಟಕದ ಅಧ್ಯಕ್ಷ ಎಚ್. ಬಾಲರಾಜ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಭೂಕಬಳಿಕೆಗೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಂಪಸಾಗರ-3ನೇ ಕಾಲೋನಿಯ ನಿವಾಸಿ ಪಿಚ್ಚಿ ಮಿನಾಕ್ಷಮ್ಮ ಅವರ 4.34 ಎಕರೆ ಜಮೀನನ್ನು ಅಡ ಇಟ್ಟು ರಮೇಶನ ಬಳಿ ಸಾಲ ಪಡೆದಿದ್ದರು. ಆದರೆ ರಮೇಶ ಅಡಮಾನ ಪತ್ರವನ್ನು ಖರೀದಿ ಪತ್ರವನ್ನಾಗಿ ದುರ್ಬಳಕೆ ಮಾಡಿಕೊಂಡು ರೈತ ಮಹಿಳೆಯನ್ನು ಬೀದಿಗೆ ತರುವ ಪ್ರಯತ್ನ ಮಾಡಿದ್ದಾನೆ ಎಂದು ಆರೋಪಿಸಿದರು.
ಬೂದನೂರು ರಮೇಶ ಗ್ರಾಮದಲ್ಲಿ ಇದೇ ರೀತಿ ಹಲವು ರೈತರಿಗೆ ಮೋಸ ಮಾಡುವ ಕಾಯಕದಲ್ಲಿ ನಿರತನಾಗಿದ್ದಾನೆ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನೀರಿಕ್ಷಕ ಹಾಗೂ ಉಪನೊಂದಣಿ ಇಲಾಖೆ ಅಧಿಕಾರಿಗಳು ರಮೇಶನ ಕೃತ್ಯಕ್ಕೆ ಬೆಂಗಾವಲಾಗಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಎಚ್. ನಾಗರಾಜ, ಜಿ. ಸೂರಿಬಾಬು, ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಬಸವರಾಜ, ಹಸಿರುಸೇನೆ ಅಧ್ಯಕ್ಷ ಏಣಿಗಿ ಮಾಬುಸಾಬ್, ಕರವೇ ಹೊಬಳಿ ಘಟಕದ ಕಾರ್ಯದರ್ಶಿ ಚಂದ್ರಶೇಖರ, ಮುಖಂಡ ಗುಡ್ಲನೂರು ಜಯಣ್ಣ, ಪೂಜಾರ ನಿಂಗಪ್ಪ, ತಿಗರಿ ಬಸವರಾಜ ಮತ್ತಿತರರು ಇದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!