ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತೈಲ ಬೆಲೆ ಏರಿಕೆ: ಪ್ರತಿಭಟನೆ

Mainashree
Updated On : 3 Jul 2014, 9:15 am

ಬಳ್ಳಾರಿ: ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೀತಿ ಖಂಡಿಸಿ ಕರ್ನಾಟಕ ಜನಶಕ್ತಿ ಸಂಘದ ಕಾರ್ಯಕರ್ತರು ದ್ವಿಚಕ್ರ ವಾಹನಗಳನ್ನು ತಳ್ಳುತ್ತ ನಗರದಲ್ಲಿ ಬುಧವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ನಗರದ ಡಾ. ರಾಜ್‌ಕುಮಾರ್ ವೃತ್ತದಿಂದ ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿ, ಆನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯಾಧ್ಯಕ್ಷ ವೈ. ಪ್ರತಾಪರೆಡ್ಡಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸುತ್ತಿದ್ದ ಬಿಜೆಪಿ ಇದೀಗ ಅಧಿಕಾರಕ್ಕೆ ಬರುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ದಿಢೀರನೇ ಏರಿಸಿರುವುದು ದೇಶದ ಜನತೆಗೆ ಆಘಾತ ಮೂಡಿಸಿದೆ ಇದು ಖಂಡನೀಯ ಎಂದರು.
ಬೆಲೆ ಏರಿಕೆಯಿಂದಾಗಿ ಸಾರಿಗೆ, ಸಂಪರ್ಕಗಳ ದರಗಳೂ ಏರಿಕೆಯಾಗಲಿವೆ. ನಿತ್ಯದ ವಸ್ತುಗಳ ಬೆಲೆಗಳೂ ಗಗನಕುಸುಮವಾಗಲಿವೆ. ಸದ್ಯ ಈಗಿರುವ ಬೆಲೆಗಳಿಂದಲೇ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಬಡವರು, ಶ್ರಮಿಕರು, ಮಧ್ಯಮ ವರ್ಗದವರಿಗೆ ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಲಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಪಿ. ಅಲ್ಲಾಸಾಬ್, ನಗರಾಧ್ಯಕ್ಷ ಜಿ. ಲಕ್ಷ್ಮೀ ನಾರಾಯಣ ಯಾದವ್, ಸಿ.ಈಶ್ವರ್ ರೆಡ್ಡಿ, ಜಿ.ಕೆ. ಭಾಸ್ಕರ್ ರೆಡ್ಡಿ, ಬಿ. ಬಸಪ್ಪ, ವೇಣುಗೋಪಾಲ್, ಪೆದ್ದನ್ನರೆಡ್ಡಿ, ವರಲಕ್ಷ್ಮಿ, ವೀರೇಶ್ ಇದ್ದರು.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಿ ದೇಶದ ಜನರ ಹಿತ ಕಾಯಬೇಕಾದ ಬಿಜೆಪಿ ನೇತೃತ್ವದ ನೂತನ ಕೇಂದ್ರ ಸರ್ಕಾರ ಆರಂಭದಲ್ಲಿಯೇ ಬೆಲೆ ಏರಿಕೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ದಿಢೀರನೇ ಬೆಲೆ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ. ಹೀಗಾಗಿ, ಕೂಡಲೇ ಏರಿಕೆಯಾಗಿರುವ ಬೆಲೆಗಳನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
- ವೈ. ಪ್ರತಾಪ ರೆಡ್ಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement