ಅಂಗವಿಕಲರ ವೈದ್ಯಕೀಯ ತಪಾಸಣೆ ಶಿಬಿರ ಯಶಸ್ವಿ
ಸಿರುಗುಪ್ಪ: 2012-13ನೇ ಸಾಲಿನಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿರಿಸಿದ ಶೇ. 3ರ ಅನುದಾನದಲ್ಲಿ ಅಂಗವಿಕಲರ ವೈದ್ಯಕಿಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಂಗವಿಕಲರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಪಂ ಮುಖ್ಯಾಧಿಕಾರಿ ಪ್ರೇಮ್ ಚಾರ್ಲ್ಸ್ ಹೇಳಿದರು.
ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ, ಕರ್ನಾಟಕ ರಾಜ್ಯ ಅಂಗವಿಕಲರ, ಪಾಲಕರ ಒಕ್ಕೂಟ ಹಾಗೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಅಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗವಿಕಲರ ವೈದ್ಯಕಿಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಅಂಗವಿಕಲರ, ಪಾಲಕರ ಒಕ್ಕೂಟದ ಸಂಚಾಲಕ ಸುರೇಶ ಮಾತನಾಡಿದರು. ಬಳ್ಳಾರಿ ವಿಮ್ಸ್ ವೈದ್ಯಕಿಯ ತಂಡ ಎಲುಬು ಮತ್ತು ಕೀಲು ವಿಭಾಗದ ಡಾ.ಬಿ. ರಮೇಶ, ನೇತ್ರ ಚಿಕಿತ್ಸಾಶಾಸ್ತ್ರ ವಿಭಾಗದ ಡಾ. ನಿರ್ಮಲ್ ಕುಮಾರ್, ಎಂ. ವೀರಭದ್ರಯ್ಯ, ಇಎನ್‌ಟಿ ವಿಭಾಗದ ಡಾ. ಅಭಿಲಾಷ್, ಮನೋರೋಗಶಾಸ್ತ್ರ ವಿಭಾಗದ ಡಾ. ವಿಜಯ್‌ರಾಜ್ ಮತ್ತು ಇತರೆ ವೈದ್ಯಕಿಯ ಸಿಬ್ಬಂದಿ ಭಾಗವಹಿಸಿದ್ದರು.
ಅಂಗವಿಕಲ ವೈದ್ಯಕೀಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಪಂ ಅಧ್ಯಕ್ಷ ಕೆ. ಭೀಮಲಿಂಗಪ್ಪ, ಉಪಾಧ್ಯಕ್ಷೆ ಚೆನ್ನವೀರಮ್ಮ, ಸದಸ್ಯ ಪರಮೇಶ್ವರಪ್ಪ ಮತ್ತು ಇತರರು ಇದ್ದರು.