ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಜೆಪಿಯಿಂದ ಬರ ಸಮೀಕ್ಷೆ

Mainashree
Updated On : 7 Jul 2014, 10:05 am

ಹೊಸಪೇಟೆ: ಮುಂಗಾರು ಮಳೆ ಸಂಪೂರ್ಣ ವಿಫಲವಾಗಿರುವುದರಿಂದ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜು. 12 ಮತ್ತು 13ರಂದು ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಿ, ಸಮಿತಿ ರಚಿಸಿ, ಎಲ್ಲ ಜಿಲ್ಲೆಗಳ ಸಮೀಕ್ಷೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಮಾಜಿ ಶಾಸಕ ಜಿ. ಶಂಕರಗೌಡರ ಮನೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಅಧಿವೇಶದಲ್ಲಿ ಮುಂಗಾರು ವೈಫಲ್ಯ ಹಾಗೂ ರೈತರ ಸಂಕಷ್ಟಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ. ಶಾಸಕ ಕಾಶಪ್ಪನವರ ಪ್ರಕರಣದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸಭಾಪತಿಗಳು ಉತ್ತರ ನೀಡಲು ಹೇಳಿದರೂ ಅದಕ್ಕೆ ಗೌರವ ಸಲ್ಲಿಸದೆ ಗೃಹ ಸಚಿವರು ಉದ್ಧಟತನ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಗಿ ಬಳಿ ಸ್ಥಾಪಿಸುತ್ತಿರುವ ಉಷ್ಣ ವಿದ್ಯುತ್ ಸ್ಥಾಪರ ಯೋಜನೆ ವಿರೋಧಿಸಿ ರೈತರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ಮತ್ತು ಗೋಲಿಬಾರ್ ನಡೆಸಿರುವುದು ಸರಿಯಲ್ಲ. ಸರ್ಕಾರ ಮೊದಲೇ ರೈತರೊಂದಿಗೆ ಚರ್ಚಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಘಟನೆಗೆ ಸರ್ಕಾರವೇ ಹೊಣೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ, ಸ್ಥಳೀಯ ಬಿಜೆಪಿ ಮುಖಂಡ ಜಿ. ಭರಮಲಿಂಗನಗೌಡ, ಸಂದೀಪ್ ಸಿಂಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ, ತಾಲೂಕು ಅಧ್ಯಕ್ಷ ವಿನಾಯಕ ಸ್ವಾಮಿ, ವ್ಯಾಸನಕೇರಿ ಶ್ರೀನಿವಾಸ, ಅಶೋಕ್ ಜೀರೆ, ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್, ಡಿ.ಎಂ. ಶಶಿಧರಯ್ಯಸ್ವಾಮಿ, ಗೋಸಲಭರಮಪ್ಪ, ಕಾಕುಬಾಳು ಸೀತಮರಾಮ ಶೆಟ್ಟಿ, ಭೂಪಾಲ್ ರಾಘವೇಂದ್ರ ಶೆಟ್ಟಿ, ಮಹೇಂದ್ರ ಜೈನ್, ವಸತ್ ಕುಮಾರ್, ಚಂದ್ರಶೇಖರ್, ಭವರ್‌ಲಾಲ್, ಗುಜ್ಜಲ್ ಹನುಮೇಶ್, ರಾಜಶೇಖರ್ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement