ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಯೋಗ ಸಾಧನೆ ಎಲ್ಲರಿಗೂ ಸಿಗಲಿ: ರೆಡ್ಡಿ

Mainashree
Updated On : 15 Jul 2014, 9:43 am

ಬಳ್ಳಾರಿ: ಯೋಗ ಸಾಧನೆಗಳು ಕೇವಲ ನಗರಕ್ಕೆ ಸೀಮಿತವಾಗದೆ, ಇಡೀ ಜಿಲ್ಲೆಯ ಜನತೆಗೆ ವಿಸ್ತರಿಸಬೇಕು ಎಂದು ಮಾಜಿ ಶಾಸಕ, ಕೆಎಂಎಫ್ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು.
ನಗರದ ವುಂಕಿ ಮರಿಸಿದ್ದಮ್ಮ ಪ್ರೌಢಶಾಲೆಯಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಗುರು ಪೌರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತಂಜಲಿಯ ಯೋಗ ಸಾಧಕ ಭವರ್‌ಲಾಲ್ ಮಾತನಾಡಿ, ಯೋಗ ಸಾಧಕರು ನಿಸ್ವಾರ್ಥವನ್ನು ಮೈಗೂಡಿಸಿಕೊಂಡು ಜನರನ್ನು ರೋಗ ಮುಕ್ತರನ್ನಾಗಿ ಮಾಡಬೇಕು ಎಂದರು.
ಉಪನ್ಯಾಸಕ ಶಿವಾನಂದ ಹೊಂಬಳೆ, ಪಾಲಿಕೆ ಸದಸ್ಯ ಎಸ್.ಮಲ್ಲನಗೌಡ ಮಾತನಾಡಿದರು. ಕರಿಸಬವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿ.ಎಂ. ಗಂಗಾಧರಯ್ಯ ಸ್ವಾಗತಿಸಿದರು. ಗಣೇಕಲ್ ಎರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಸ್ವಿ ಪಂಪಾಪತಿ ನಿರೂಪಿಸಿ, ವಂದಿಸಿದರು. ಎಸ್.ಸಿ.ಪುರಾಣಿಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement