ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯುತ್ ತಗುಲಿ ವ್ಯಕ್ತಿ ಸಾವು

Mainashree
Updated On : 15 Jul 2014, 9:43 am

ಹೂವಿನಹಡಗಲಿ: ತಾಲೂಕಿನ ಬಸರಹಳ್ಳಿಯಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಲೈನ್‌ಮನ್ ಗಾಯಗೊಂಡಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಅರುಣಕುಮಾರ (32) ಮೃತ ದುರ್ದೈವಿ. ಲೈನ್‌ಮನ್ ಮನು ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಸೋಮವಾರ ಬೆಳಗ್ಗೆ 11.50ಕ್ಕೆ ಬಸರಹಳ್ಳಿಯಲ್ಲಿ ನಿರಂತರ ಜ್ಯೋತಿ ಮಾರ್ಗದಲ್ಲಿ ವಿದ್ಯುತ್ ಮಾರ್ಗ ದುರಸ್ತಿ ಮಾಡಲು ಮೇಲಧಿಕಾರಿಗಳಿಂದ ವಿದ್ಯುತ್ ಮಾರ್ಗ ನಿಲುಗಡೆ ಪಡೆದು ಕೆಲಸ ಪ್ರಾರಂಭಿಸಿದ್ದಾನೆ. ಕೇವಲ ಐದು ನಿಮಿಷ ಕಳೆಯುವಷ್ಟರದಲ್ಲಿ ವಿದ್ಯುತ್ ಸಂಚಾರ ಆರಂಭವಾಗಿದೆ. ಈ ವೇಳೆ ದುರಸ್ತಿ ಮಾಡುತ್ತಿದ್ದ ಅರುಣಕುಮಾರ್ ತಂತಿ ಮೇಲೆಯೆ ಪ್ರಾಣ ಬಿಟ್ಟಿದ್ದಾನೆ.
ಪ್ರತಿಭಟನೆ: ವಿದ್ಯುತ್ ಕಂಬದ ಮೇಲಿನ ಶವವನ್ನು ಕೆಳಗೆ ಇಳಿಸಲು ಸಾಧ್ಯವಿಲ್ಲ. ಈ ಘಟನೆಗೆ ಕಾರಣವಾಗಿರುವ ಸೋವೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಶಾಖಾಧಿಕಾರಿ ಭಾಸ್ಕರ ಅವರನ್ನು  ಸ್ಥಳಕ್ಕೆ ಕರೆ ತರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಭಾಸ್ಕರ್ ತಾವು ಕೆಲಸದ ಒತ್ತಡಗಳ ನಡುವೆ ಇದ್ದ ಕಾರಣ ಬಸರಹಳ್ಳಿ ಮಾರ್ಗದ ವಿದ್ಯುತ್ ಲೈನ್ ಚಾರ್ಚ್ ಮಾಡಲು ತಿಳಿಸಿದ್ದಾಗಿ ಗ್ರಾಮಸ್ಥರು ಮುಂದೆ ಒಪ್ಪಿಕೊಂಡರು.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಭಾಸ್ಕರ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರಿಗೆ ಪಟ್ಟು ಹಿಡಿದರು. ಇದರಿಂದ ಗಾಬರಿಗೊಂಡ ಭಾಸ್ಕರ್ ಪೊಲೀಸರ ರಕ್ಷಣೆಯಲ್ಲಿ ಅಲ್ಲಿಂದ ಕಾಲ್ಕಿತ್ತರು.
ಅರುಣಕುಮಾರ ಸಾವಿಗೆ ಸಂಚು ಹೂಡಿ ವಿದ್ಯುತ್ ಲೈನ್ ಚಾರ್ಚ್ ಮಾಡಿದ್ದಾರೆ. ಈ ಘಟನೆಗೆ ಭಾಸ್ಕರ್ ಕಾರಣರಾಗಿದ್ದು, ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಲ್ಲಿಯ ವರೆಗೆ ತಂತಿ ಮೇಲಿನ ಶವವನ್ನು ಕೆಳೆಗ ಇಳಿಸುವುದಿಲ್ಲ ಎಂದು ಪಟ್ಟು ಹಿಡಿದು, ವಿದ್ಯುತ್ ಮಾರ್ಗ ನಿಲುಗಡೆ ಪುಸ್ತಕವನ್ನು ಪಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಭಾಸ್ಕರ ಈ ಭಾಗದ ರೈತರಿಂದ ಲಕ್ಷಾಂತರ ರು. ಲಂಚ ಪಡೆದಿದ್ದಾರೆ. ವಿದ್ಯುತ್ ಟಿಸಿಗಳು, ತಂತಿ ಮತ್ತು ವಿದ್ಯುತ್ ಕಂಬಗಳನ್ನು ಅಮಾಯಕರಿಂದ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಕೂಡಲೇ ಭಾಸ್ಕರ್ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಜೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರನಾಯ್ಕ ಹಾಗೂ ಸಿಪಿಐ ಪ್ರಕಾಶ್ ರಾಠೋಡ್ ಹಾಗೂ ಗ್ರಾಮಸ್ಥರ ಮನವೊಲಿಸಿದ ಮಂತರ ತಂತಿ ಮೇಲಿನ ಶವ ಕೆಳಗಿಳಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement