ಕ್ಷೌರಿಕ ಕ್ಷೇಮಾಭಿವೃದ್ಧಿ ಸಂಘ ಆರಂಭ
ಬಳ್ಳಾರಿ: ಸ್ಥಳೀಯ ಕೌಲ್ಬಜಾರ್ ಪ್ರದೇಶದಲ್ಲಿ ಬಳ್ಳಾರಿ ಕ್ಷೌರಿಕ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಪಾಲಿಕೆಯ 35ನೇ ವಾರ್ಡಿನ ಸದಸ್ಯ, ಸವಿತಾ ಸಮಾಜದ ಮುಖಂಡ ವೆಂಕಟರಾವ್ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಸವಿತಾ ಸಮಾಜವು ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಸಮುದಾಯದ ಏಳಿಗೆಗೆ ಸಂಘಟನೆ ಅತ್ಯವಶ್ಯಕವಾಗಿದೆ. ಜತೆಗೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಆರ್. ಶೇಖಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಎಚ್. ತಿಪ್ಪಣ್ಣ, ವೀರೇಶ್, ನಾಗೇಂದ್ರ, ಜಿ. ತ್ಯಾಗರಾಜ್, ಆರ್. ಸಣ್ಣ ಶೇಖಣ್ಣ, ಎಂ. ನಾಗರಾಜ್, ಪಕ್ಕೀರ, ಪೊಂಪಾಪತಿ ಇದ್ದರು.