ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಹುಮಾನ ವಿತರಣೆ ಇಂದು

Rashmi Kasaragodu
Updated On : 20 Jul 2014, 11:50 am

ಕಂಪ್ಲಿ: ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಂಪ್ಲಿ ನಗರ ಮತ್ತು ಕ್ಷೇತ್ರ ಘಟಕ ಸಹಯೋಗದಲ್ಲಿ ಕಂಪಲಿರಾಯ ಜ್ಞಾಪಕಾರ್ಥ ಜೂ. 29ರಿಂದ ಹಮ್ಮಿಕೊಳ್ಳಲಾಗಿದ್ದ ಮುಕ್ತ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ಇಲ್ಲಿನ ಭಾರತಿ ಶಿಶು ವಿದ್ಯಾಲಯ ಆವರಣದಲ್ಲಿ ಜು. 20ರ ಸಂಜೆ 5.30ಕ್ಕೆ ನಡೆಯಲಿದೆ. ಗಂಗಾವತಿ ಪ್ರಾಣೇಶ್, ನರಸಿಂಹ ಜೋಷಿ ಹಾಗೂ ಬಸವರಾಜ ಮಹಾಮನಿ ಹಾಸ್ಯ ಸಂಜೆ ನಡೆಸಿಕೊಡುವರು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವು, ಮುಖ್ಯ ಅತಿಥಿಗಳಾಗಿ ಹಂಪಿ ಡಿವೈಎಸ್ಪಿ ಬಿ.ಎನ್. ಲಾವಣ್ಯಾ, ಸಿಪಿಐ ವಿ. ರಘುಕುಮಾರ್, ಕಂಪ್ಲಿ ಪಿಎಸ್‌ಐ ಡಿ. ಹುಲುಗಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷ ಎಸ್. ಸುರೇಶ್, ಹೊಸಪೇಟೆ ತಾಲೂಕು ಅಧ್ಯಕ್ಷ ಬೋಡ ರಾಮಪ್ಪ, ಕಂಪ್ಲಿ ಕ್ಷೇತ್ರ ಅಧ್ಯಕ್ಷ ಸಿ.ಆರ್. ಹನುಮಂತ, ಕಂಪ್ಲಿ ನಗರ ಅಧ್ಯಕ್ಷ ಎನ್. ಹಬೀಬ್ ರೆಹಮಾನ್, ಕಂಪ್ಲಿ ವಿದ್ಯಾರ್ಥಿ ಘಟಕ ಅಧ್ಯಕ್ಷ ಕೆ. ತಿಮ್ಮಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ. ರಾಜೇಂದ್ರಕುಮಾರಸ್ವಾಮಿ ಮತ್ತಿತರರು ಆಗಮಿಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement