ಬಳ್ಳಾರಿ

ಕನ್ನಡ ಭಾಷೆ ಉಳಿವಿಗೆ ಹೋರಾಡಿ

ಕನ್ನಡಪ್ರಭವಾರ್ತೆ, ಕುರುಗೋಡು, ಜು. 20
ಕನ್ನಡಕ್ಕೆ ರಾಜಕಾರಣಿಗಳಿಂದಲೇ ಧಕ್ಕೆಯಾಗಿದ್ದು, ಕನ್ನಡ ಬಗ್ಗೆ ಗಂಭೀರ ಚಿಂತನೆ ನಡೆಸುವ ಜೊತೆಗೆ ಸಂಘಟನಾತ್ಮಕ ಹೋರಾಟ, ಶಕ್ತಿ ಅಗತ್ಯವಿದೆ ಎಂದು ಸಿರುಗುಪ್ಪ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿರಿಗೇರಿ ಪನ್ನರಾಜ್ ಹೇಳಿದರು.
ಪಟ್ಟಣ ಸಮೀಪದ ಸಿದ್ದರಾಂಪುರ ಗ್ರಾಮದ ಕದಳೀವನದ ಮಠದ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಘಟಕದ ಸಹಕಾರದೊಂದಿಗೆ ಸಂಘಟಿಸಿದ್ದ ಸಿರುಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಮೂರರನೇ ಸಮ್ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯ, ಕಥೆ, ಪ್ರಬಂಧ ಬರೆದರೆ ಮಾತ್ರ ಸಾಹಿತಿಗಳಲ್ಲ. ಈ ನಿಟ್ಟಿನಲ್ಲಿ ನನ್ನ ಬಗ್ಗೆ ಹೇಳುವುದಾದರೆ ನಾನು ಸಾಹಿತಿ ಅಲ್ಲ, ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೂ ಅರ್ಹನಲ್ಲ. ಪ್ರಸ್ತುತ ಸಾಮಾಜಿಕ ಸಂದರ್ಭ, ಅದರ ತೊಳಲಾಟ, ಕನ್ನಡ ಭಾಷೆ ಬಗ್ಗೆ ನಡೆಸಿದ ಹೋರಾಟ ಇವೆಲ್ಲದರ ಅನುಭವ ಸಾಹಿತ್ಯದ ರೂಪ ಪಡೆಯುವ ಅಗತ್ಯವಿದೆ. ಈ ವಿಶಾಲ ಭಾವನೆಯಿಂದಲೆ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಹೋರಾಟಗಾರರನ್ನು ಹಾಗೂ ಸಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕೆಲಸ ನಡೆಸಿರುವುದು ಸ್ವಾಗತಾರ್ಹ ಎಂದರು.
ಸಾನ್ನಿಧ್ಯ ವಹಿಸಿದ್ದ ಸಿದ್ದಾರಾಮಪುರ ಚಿದಾನಂದಯ್ಯ ತಾತ ಮಾತನಾಡಿ, ಶರಣ ಸಾಹಿತ್ಯ ಸರಳವಿದ್ದರಿಂದ ಅದು ಸಾಮಾಜಿಕ ಪ್ರಜ್ಞೆ ತಿದ್ದಲು ಪ್ರಯತ್ನಿಸಿತು. ಆಗ ಹುಟ್ಟಿದ ಅನೇಕ ಜನಪದ ಸಂಸ್ಕೃತಿಗಳು ಇಂದಿನ ದೃಶ್ಯ ಮಾಧ್ಯಮದಿಂದ ಅವನತಿಯ ಜಾಡು ಹಿಡಿದಿವೆ ಎಂದರು.
ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಸ್ವಾಮಿ, ಹಸಿರು ಸೇನ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿರಿಗೇರಿ ಯರ್ರಿಸ್ವಾಮಿ, ತಾಪಂ ಸದಸ್ಯೆ ಬಿ. ಗಂಗಮ್ಮ, ಕೊಂಚಿಗೇರಿ ತಾಪಂ ಸದಸ್ಯೆ ಶೈಲೈಜಾ, ಸಿರಿಗೇರಿ ಗ್ರಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಕೊಂಚಿಗೇರಿ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಸಿರುಗುಪ್ಪ ಎಪಿಎಂಸಿ ಅಧ್ಯಕ್ಷ ವೀರನಗೌಡ, ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಎಂ. ನಾಗರಾಜಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ಟಿ.ಎಚ್. ಸುಬಾನ್ಸಾಬ್, ನಾಗರಾಜ್ ಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು. ಸಿರಿವಾರ ಪ್ರೌಢಶಾಲೆ ವಿದ್ಯಾರ್ಥಿ ವೀಣಾ ತಂಡ ನಾಡಗೀತೆ ಹಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!