ಬಳ್ಳಾರಿ

ಪತ್ರಿಕೆಗಳಿಂದ ಸಮಾಜ ಪರಿವರ್ತನೆ

ಹೊಸಪೇಟೆ: ಸಾಮಾಜಿಕ ಪರಿವರ್ತನೆಯಲ್ಲಿ ಪತ್ರಿಕೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ಶಾಸಕ ಎಸ್. ಭೀಮಾನಾಯ್ಕ್ ತಿಳಿಸಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ದಿನ ಮಾಧ್ಯಮ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮವಿನಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಗಳನ್ನು ದಾಖಲಿಸುವ ಮಹತ್ವದ ಕೆಲಸವನ್ನು ದಿನಪತ್ರಿಕೆಗಳು ಮಾಡುತ್ತಿವೆ ಎಂದರು.
ಪ್ರಸ್ತುತ ಸಮಾಜಲ್ಲಿ ಮಹಿಳೆ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪತ್ರಿಕೆಗಳು ಇವುಗಳನ್ನು ಖಂಡಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪತ್ರಕರ್ತ ಪೂಜಾರಿ ವೆಂಕೋಬ ನಾಯಕ ಮಾತನಾಡಿದರು. ಹಿರಿಯ ಪತ್ರಕರ್ತ ಹಾಗೂ ಕೂಡ್ಲಿಗಿಯ ಪ್ರಾಚಾರ್ಯ ಸಿದ್ದರಾಮ ಹಿರೇಮಠ ಪತ್ರಿಕೆ ಹಾಗೂ ಸಾಮಾಜಿಕತೆ ಕುರಿತು ಉಪನ್ಯಾಸ ನೀಡಿದರು. ಎಚ್. ಎಸ್. ಶ್ರೀಹರಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹೊಸಪೇಟೆಯ ನ್ಯಾಯವಾದಿ, ಹೋರಾಟಗಾರ, ಪತ್ರಕರ್ತ ದಿ. ಮರಡಿ ವಿರೂಪಾಕ್ಷನಾಯಕ ಅವರ ಸ್ಮರಣಾರ್ಥ ಕೊಡಮಾಡುವ 2013ನೇ ಸಾಲಿನ ಮವಿನಾ ಪ್ರಶಸ್ತಿಗೆ ದಿನಪತ್ರಿಕೆ ಮಾರಾಟಗಾರ್ತಿ  ಈಡಿಗರ ಕಾಳಮ್ಮ ಅವರಿಗೆ ಹಾಗೂ 2014ನೇ ಸಾಲಿನ ಮವಿನಾ ಪ್ರಶಸ್ತಿಯನ್ನು ಜಾನಪದ ಕಲಾವಿದ ಪತ್ತಾರ್ ಪೀರಸಾಬ್ ಅವರಿಗೆ ಪ್ರದಾನ ಮಾಡಲಾಯಿತು.
ಪತ್ರಕರ್ತ ಕಿಚಿಡಿ ಕೊಟ್ರೇಶ ಸ್ವಾಗತಿಸಿದರು, ಜಿ.ವಿ. ಸುಬ್ಬರಾವ್ ಸನ್ಮಾನಿತರನ್ನು ಪರಿಚಯಿಸಿದರು. ಸೋಮಶ್ ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತಾಡಿದರು. ಸಿಕೆ. ನಾಗರಾಜ ವಂದಿಸಿದರು. ಪಿ. ರಾಮಚಂದ್ರ ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!