ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕ್ರೀಡಾಂಗಣ ದುರಸ್ತಿಗೆ ಕರವೇ ಆಗ್ರಹ

Lingaraj Badiger
Updated On : 24 Jul 2014, 11:42 am

ಕುರುಗೋಡು: ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿರುವ ಕ್ರೀಡಾಂಗಣದ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕೆಂದು ಆಗ್ರಹಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಮಂಗಳವಾರ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ವೇದಿಕೆಯ ಸ್ಥಳೀಯ ಘಟಕದ ಅಧ್ಯಕ್ಷ ಬಿ. ದುರ್ಗಾಪ್ರಸಾದ್ ಮಾತನಾಡಿ, ಕ್ರೀಡಾಂಗಣದಲ್ಲಿನ ವೇದಿಕೆಯ ಮೇಲ್ ಹೊದಿಕೆ ಗಾಳಿಗೆ ಬಿದ್ದು, ನಾಲ್ಕು ತಿಂಗಳಾದರೂ ಕಾಲೇಜ್ ಆಡಳಿತ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಕ್ರೀಡಾಂಗಣದಲ್ಲಿರುವ ಗುಂಡಿಯಲ್ಲಿ ಮಳೆ ನೀರು ನಿಂತು ದುರ್ನಾತ ಬೀರುತ್ತಿದ್ದರೂ ವಿಲೇವಾರಿಗೊಳಿಸಿ ನೆಲ ಸಮತಟ್ಟುಗೊಳಿಸಲು ಕ್ರಮ ಕೈಗೊಂಡಿಲ್ಲ. ಪಟ್ಟಣದ ಕ್ರೀಡಾ ಚಟುವಟಿಕೆಗೆ ಕೇಂದ್ರವಾಗಿರುವ ಈ ಕ್ರೀಡಾಂಗಣಕ್ಕೆ ಸೂಕ್ತ ನಿರ್ವಹಣೆ ಇಲ್ಲದೆ ನಿರುಪಯುಕ್ತಗೊಳ್ಳುತ್ತಿದೆ. ಇಷ್ಟರಲ್ಲಿ ನಾಡಹಬ್ಬಗಳು ನಡೆಯಲಿದ್ದು, ಇದರ ನಿಮಿತ್ತ ನಡೆಯುವ ಕ್ರೀಡಾ ಚಟುವಟಿಕೆಗೆ ಸ್ಥಳವಿಲ್ಲದಂತಾಗಿದೆ. ಜಿಲ್ಲಾಡಳಿತ ತಕ್ಷಣ ಕ್ರೀಡಾಂಗಣದ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಪ ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಕ್ರೀಡಾಂಗಣ ದುರಸ್ತಿ ಕಂದಾಯ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಇಲ್ಲವೆ ಕಾಲೇಜ್ ಆಡಳಿತಕ್ಕೆ ಮನವಿ ಸಲ್ಲಿಸಿ. ಆದರೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ನಂತರ ಪದವಿಪೂರ್ವ ಕಾಲೇಜ್ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಉಪ ಪ್ರಾಚಾರ್ಯ ರವೀಂದ್ರ ಮಾತನಾಡಿ, ಕ್ರೀಡಾಂಗಣ ದುರಸ್ತಿ ಹಾಗೂ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯಿಂದ ಮಂಜೂರಾತಿ ದೊರೆತಿದೆ, ಅನುದಾನ ಬಿಡಗಡೆಗೊಂಡಿದೆ, ಆದರೆ ಅಂದಾಜು ವೆಚ್ಚದ ಪಟ್ಟಿಗೆ ಜಿಪಂನಿಂದ ತಾಂತ್ರಿಕ ಅನುಮೋದನೆ ಪಡೆಯಬೇಕಿದೆ. ಇಷ್ಟರಲ್ಲಿ ಪರವಾನಗಿ ದೊರೆಯಲಿದ್ದು, ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಭರವಸೆ ನೀಡಿದರು.  
ಕರವೇ ಘಟಕದ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಶಶಿ, ಶೇಷಾದ್ರಿ, ಸಿದ್ದಿಸಾಬ್, ಹೊನ್ನೂರು ಸಾಬ್, ರಾಮು, ಗೂಳೆಪ್ಪ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement