ಗೂಂಡಾಗಿರಿ ಖಂಡಿಸಿ ಕರವೇ ಮನವಿ
ಹೊಸಪೇಟೆ: ಬೆಳಗಾವಿಯಲ್ಲಿ ಎಂಇಎಸ್ ಗೂಂಡಾಗಿರಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬೆಳಗಾವಿಯ ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರವೇ ತಾಲೂಕು ಅಧ್ಯಕ್ಷ ಎನ್. ಈಶ್ವರ್, ಮುಖಂಡ ಸುಂಕಣ್ಣ, ಎಂ., ಮಸ್ತಾನಪ್ಪ, ಚಂದ್ರಶೇಖರ್, ಮಂಜುನಾಥ, ಸುರೇಶ್, ರಾಜು, ಚಂದ್ರು, ಜಿತೇಂದ್ರ, ರಾಮ್‌ಲಾಲ್, ಲೂಯಿಸ್, ವಿ. ಮನೋಹರ್ ಇತರರು ಮನವಿ ಸಲ್ಲಿಸಿ ಒತ್ತಾಯಿಸಿದರು.