ಬಳ್ಳಾರಿ

ಸಂಡೂರಲ್ಲಿ ಕಲ್ಲು ಗಣಿ ಸದ್ದು

 ಕನ್ನಡಪ್ರಭ ವಾರ್ತೆ, ಸಂಡೂರು, ಜೂ. 1
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದಿರು ಗಣಿಗಾರಿಕೆಗೆ ತಡೆಬಿದ್ದ ನಂತರ ಶಾಂತವಾಗಿದ್ದ ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆ ಸದ್ದು ಆರಂಭವಾಗಿದೆ. ಪ್ರಭಾವಿಗಳ ಕೈಮೇಲಾಗಿದ್ದು, ಗ್ರಾಮೀಣರಲ್ಲಿ ಮತ್ತೆ ಆತಂಕದ ಛಾಯೆ ಮೂಡಿದೆ.
ತಾಲೂಕಿನ ಚೋರನೂರು, ಕಾಳಿಂಗೇರಿ, ಜೋಗಿಕಲ್ಲು, ಬಂಡ್ರಿ, ಹುಲಿಕುಂಟೆ, ಕಾಟಿನಕಂಬ, ಶ್ರೀರಾಮಶೆಟ್ಟಿ ಹಳ್ಳಿ, ದೇವರ ಬುಡ್ಡೇನಹಳ್ಳಿ, ಮಲ್ಲಾಪುರ, ತಿಮ್ಮಲಾಪುರ, ಅಂತಾಪರ, ಮಾಳಾಪುರ, ಕೊಡಾಲು, ಲಿಂಗದಳ್ಳಿ, ಸುತ್ತಮತ್ತಲಿನ ಕಲ್ಲುಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ನೂರಾರು ಮಂದಿ ಅರ್ಜಿ ಹಾಕಿಕೊಂಡಿದ್ದಾರೆ.
ತಾಲೂಕಿನ 47 ಕಲ್ಲು ಕ್ವಾರಿಗಳಲ್ಲಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. 2003ರಿಂದ 2014ರ ಫೆಬ್ರವರಿಯವರೆಗೆ 60ಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿವೆ ಎನ್ನುವುದು ವಿಶೇಷ. 2 ಎಕರೆಯಿಂದ ಹಿಡಿದು 200 ಎಕರೆ ಪ್ರದೇಶದವರೆಗೂ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಅರ್ಜಿದಾರರು ಬೇಡಿಕೆ ಮುಂದಿಟ್ಟಿದ್ದಾರೆ.
ತಾಲೂಕಿನ ಉಳ್ಳವರ ಲಾಬಿ
ಅದಿರು ಗಣಿಗಾರಿಕೆ ನಿಂತ ಕಾರಣ ದುಡಿಮೆ ಕಳೆದುಕೊಂಡ ಉಳ್ಳವರು, ಹೆಚ್ಚು ಲಾಭ ತಂದು ಕೊಡುವ ಮತ್ತು ಸುಲಭವಾಗಿ ನಿಭಾಯಿಸುವ ಕಲ್ಲು ಗಣಿಗಾರಿಕೆಗೆ ಮುಂದಾಗಿದ್ದಾರೆ. ಕಲ್ಲು ಗಣಿಗಾರಿಕೆ ಬೇಕೆಂದು ಅರ್ಜಿ ಹಾಕಿದವರಲ್ಲಿ ಮುಖ್ಯವಾಗಿ ಗುತ್ತಿಗೆದಾರರು, ಜಿ.ಪಂ. ಸದಸ್ಯರು, ಗ್ರಾ.ಪಂ. ಮಾಜಿ ಅಧ್ಯಕ್ಷರು ಸೇರಿದಂತೆ  ರಾಜಕಾರಣದ ವಲಯದಲ್ಲಿ ಗುರುತಿಸಿ ಕೊಂಡವರ ಸಂಖ್ಯೆ ಹೆಚ್ಚಿದೆ.
ತಾಲೂಕಿನ ದೋಣಿ ಮಲೈ, ಲಿಂಗದಹಳ್ಳಿ, ಅಂತಾಪುರ, ಮರುಟ್ಲ, ಚಿಕ್ಕಅಂತಾಪುರ ಗ್ರಾಮಗಳ ಸರಹದ್ದಿನಲ್ಲಿ 60 ರಿಂದ 600 ಮೀಟರ್ ಉದ್ದ ಮತ್ತು 6ರಿಂದ 25 ಮೀಟರ್ ಅಗಲ ಪ್ರದೇಶದಲ್ಲಿ ಬೆಣಚು ಕಲ್ಲಿನ  ಗುಡ್ಡಗಳಿವೆ. ಈ ಬೆಣಚು ಕಲ್ಲಿನಲ್ಲಿ ಶೇ. 93ರಿಂದ 98ರಷ್ಟು ಸಿಲಿಕಾನ್ ಅಂಶ ಇರುವುದಾಗಿ ಮತ್ತು 3.8 ಮಿಲಿಯನ್ ಟನ್‌ಗಳಷ್ಟು ಪ್ರಮಾಣದಲ್ಲಿ ಬೆಣಚು ಶಿಲೆ ಸಿಗುವ ಸಾಧ್ಯತೆ ಇರುವುದಾಗಿ ತಜ್ಞರ ಅಭಿಪ್ರಾಯವಿದೆ. ಬಹು ಬೇಡಿಕೆ ಮತ್ತು ಅಲಂಕಾರಕ್ಕೆ ಬಳಸುವ ಹಸಿರು ಕ್ವಾರಿ ಶಿಲೆಯು ಉಬ್ಬಲಗಂಡಿ ಗುಡ್ಡಗಳಲ್ಲಿ ಲಭ್ಯವಿದ್ದು, ಈ ಪ್ರದೇಶದಲ್ಲಿಯೂ ಕೂಡ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡುವಂತೆ ಅರ್ಜಿ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!