ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೆಸ್ಕಾಂ ಸಾಮಗ್ರಿ ಕಳಪೆ: ಸಿಬ್ಬಂದಿ ಒಪ್ಪಿಗೆ

Mainashree
Updated On : 3 Jun 2014, 11:13 am

ಹೂವಿನಹಡಗಲಿ: ಜೆಸ್ಕಾಂನಿಂದ ನಿರಂತರ ಜ್ಯೋತಿ ಯೋಜನೆಗೆ ಕಳಪೆ ಸಾಮಗ್ರಿ ಪೂರೈಕೆಯಿಂದ ಪದೇ ಪದೆ ಕರೆಂಟ್ ಕೈ ಕೊಡುತ್ತಿದೆ ಎಂದು ಸ್ವತಃ ಜೆಸ್ಕಾಂ ಸಿಬ್ಬಂದಿಯೇ ತಪ್ಪನ್ನು ಒಪ್ಪಿಕೊಂಡಿರುವ ಘಟನೆ ಹೂವಿನಹಡಗಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜರುಗಿತು.
ಇಲ್ಲಿನ ತಾಪಂ ಮಲ್ಲಿಗೆ ಸಭಾಂಗಣದಲ್ಲಿ ಸೋಮವಾರ ತಾಪಂ ಅಧ್ಯಕ್ಷೆ ಶಿಲ್ಪಾಸಿಂಗ್ ರಾಠೋಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ, ಸದಸ್ಯರಾದ ವಾಲ್ಯನಾಯ್ಕ, ಶಾಂತೇಶ ಅವರು, ಮಳೆ-ಗಾಳಿ ಬೀಸಿದ ಕೂಡಲೇ ವಿದ್ಯುತ್ ಸಂಪರ್ಕ ಕಡಿಕಗೊಳಿಸುತ್ತಾರೆ. ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಇಲ್ಲದೇ ಜನರಿಗೆ ನೀರು ಸಿಗುತ್ತಿಲ್ಲ. ಆಯಾ ಗ್ರಾಮಗಳಲ್ಲಿ ಲೈನ್‌ಮನ್ ಸರಿಯಾಗಿ ಕೆಲಸ ಮಾಡಲ್ಲ. ಇದರಿಂದ ಜನ ರೋಸಿ ಹೋಗಿದ್ದಾರೆ ಎಂದು ಜೆಸ್ಕಾಂ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.
ಮಕರಬ್ಬಿ, ಬ್ಯಾಲಹುಣ್ಸಿ, ಕೋಟಿಹಾಳದಲ್ಲಿ ಹಳೇ ಕಾಲದ ವಿದ್ಯುತ್ ಕಂಬಗಳಿದ್ದು, ಹೊಸ ಕಂಬ ಹಾಕಲು ಕಳೆದೊಂದು ವರ್ಷದಿಂದ ಹೇಳಿದರೂ ಜೆಸ್ಕಾಂ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ. ಮೊನ್ನೆ ಗಾಳಿಗೆ ಕಂಬ ಬಿದ್ದು ದೊಡ್ಡ ಅನಾಹುತ ತಪ್ಪಿದೆ. ಇನ್ನಾದರೂ ಎಚ್ಚರದಿಂದ ಕೆಲಸ ಮಾಡ್ರಿ ಎಂದು ಸದಸ್ಯ ವಾಲ್ಯನಾಯ್ಕ ಹೇಳಿದರು.
ಬೋಗಸ್ ಬಿಲ್: ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ವರ್ಷ ಕಳೆದರೂ ಇನ್ನು ಬಿದಿರು ನೀಡಿಲ್ಲ ಯಾಕೆ ಎಂದು ಹರವಿ ಪ್ರಕಾಶ ಪ್ರಶ್ನಿಸಿ, ಹರವಿಯಲ್ಲಿ ಚಿರತೆ ದಾಳಿಗೆ ವ್ಯಕ್ತಿ ಗಾಯಗೊಂಡಿದ್ದು ಮತ್ತು ಆಕಳು ಸತ್ತಿದೆ.
 ಸರಿಯಾಗಿ ಪರಿಹಾರ ನೀಡಿಲ್ಲ. ಇಲಾಖೆ ಸಾಕಷ್ಟು ಬೋಗಸ್ ಬಿಲ್ ಮಾಡಿ ಅರಣ್ಯ ಇಲಾಖೆ ನುಂಗಿ ನೀರು ಕುಡಿದಿದೆ ಎಂದಾಗ, ವಾರದೊಳಗೆ ಫಲಾನುಭವಿಗಳಿಗೆ ಬಿದಿರು ನೀಡುತ್ತೇವೆಂದು ಅರಣ್ಯಾಧಿಕಾರಿ ಶಾಂಬಶಿವಪ್ಪ ಸಭೆಗೆ ತಿಳಿಸಿದರು.
ಹಡಗಲಿ ಸಾರಿಗೆ ಘಟಕದ ಬಸ್ ದುರಸ್ತಿಗೆ ಸಾಮಗ್ರಿ ಬರುತ್ತಿಲ್ಲ. ಕಾರ್ಮಿಕರು ಬಸ್ ರಿಪೇರಿ ಮಾಡಲು ಆಗುತ್ತಿಲ್ಲ ಎಂದು ಸದಸ್ಯ ಬಿ. ಹುಲುಗಪ್ಪ ಹೇಳಿದಾಗ, ಇದಕ್ಕೆ ಸಾರಿಗೆ ಘಟಕದ ಅಧಿಕಾರಿ ಪಾಲಾಕ್ಷ ಹರ್ತಿ, ತಾವು ಘಟಕಕ್ಕೆ ಬಂದು ವಾರವಾಯ್ತು ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ಬಸವ ವಸತಿ ಮನೆಗಳ ಕಟ್ಟಿಕೊಂಡ ಫಲಾನುಭವಿ ಸಾಲ ತೀರಿಸಲು ಸಂಬಳ ದುಡಿಯುತ್ತಿದ್ದಾರೆ. ಮನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ.
 ಕೆಲ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಕ್ರಮ ಕೈಗೊಳ್ಳಬೇಕೆಂದು ಹರವಿ ಪ್ರಕಾಶ ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.
ಸಭೆಯಲ್ಲಿ  ಉಪಾಧ್ಯಕ್ಷ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರವಿ ಪ್ರಕಾಶ, ತಾಪಂ ಇಒ ಡಾ. ರಂಗಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement