ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನೇತಾಜಿ ಪ್ರತಿಮೆ ಬದಲಿಸಿ

Mainashree
Updated On : 4 Jun 2014, 10:43 am

ಹೊಸಪೇಟೆ: ನಗರ ಹೊರವಲಯದ ಟಿ.ಬಿ. ಡ್ಯಾಂನ ಪಿಎಲ್‌ಸಿ ಕ್ಯಾಂಪ್‌ನ ನೇತಾಜಿ ನಗರದಲ್ಲಿ ರಾಷ್ಟ್ರನಾಯಕ ಸುಭಾಷ್‌ಚಂದ್ರ ಬೋಸ್ ಪ್ರತಿಮೆ ಭಗ್ನಗೊಂಡಿದ್ದು, ತಕ್ಷಣವೇ ಬೇರೆ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ ಟಿ.ಬಿ. ಡ್ಯಾಂನ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
1955ರಲ್ಲಿ ಜರ್ಮನಿಯಿಂದ ಈ ಪ್ರತಿಮೆ ತರಿಸಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲದೆ ಈ ಪ್ರದೇಶಕ್ಕೆ ನೇತಾಜಿ ಪಾರ್ಕ್ ಎಂದು ನಾಮಕರಣ ಮಾಡಲಾಗಿತ್ತು. ಪಾರ್ಕ್ ನಿರ್ವಹಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದರೂ ತುಂಗಭದ್ರಾ ಆಡಳಿತ ಮಂಡಳಿ ಈ ಪಾರ್ಕ್‌ನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಿಲ್ಲ. ಸುಭಾಷ್‌ಚಂದ್ರ ಬೋಸ್ ಪ್ರತಿಮೆ ಎಡಗೈ ಮುಷ್ಟಿ ತುಂಡಾಗಿ ಹಲವು ದಿನಗಳು ಕಳೆದರೂ ತುಂಗಭದ್ರಾ ಮಂಡಳಿ ಸರಿಪಡಿಸದೆ ರಾಷ್ಟ್ರೀಯ ನೇತಾರನನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.
ತಕ್ಷಣವೇ ಪ್ರತಿಮೆ ಬದಲಾಯಿಸಬೇಕು. ಅನುದಾನ ದುರ್ಬಳಕೆ ಮಾಡಿಕೊಂಡಿರುವ ಮಂಡಳಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಪಾರ್ಕ್ ಸ್ವಚ್ಛಗೊಳಿಸಿ, ವಾಯುವಿಹಾರಕ್ಕೆ ಅನುವು ಮಾಡಿಕೊಡಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಪದಾಧಿಕಾರಿಗಳು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಹಾಗೂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಪಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಂ. ದಾದಾ ಖಲಂದರ್, ಉಪಾಧ್ಯಕ್ಷ ಜಿ. ಗಣೇಶ್, ಹಿರಿಯ ಸಲಹಾ ಸಮಿತಿ ಸದಸ್ಯರಾದ ಅಶೋಕ್ ಕಲಾಲ್, ಪಂಪಾಪತಿ ನಾಯಕ, ಮರಿಯಪ್ಪ, ನಾಗರಾಜ್, ಬುಡೇನ್, ಅಬ್ದುಲ್ ರಜಾಕ್, ವಿರೂಪಾಕ್ಷಿ, ರಾಮು, ಮಂಜು, ಮತ್ತು ಟಿಬಿ ಡ್ಯಾಂ ಘಟಕದ ನಬೀಸಾಬ್, ನಾಗರಾಜ, ಮುರುಗನ್ ಮನವಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement