ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮನೆಗೆ ಬಾರದ ಪತ್ನಿ: ಪತಿ ಆತ್ಮಹತ್ಯೆ

Mainashree
Updated On : 6 Jun 2014, 10:11 am

ಕೊಟ್ಟೂರು: ಮನೆಗೆ ಬಾ ಎಂದು ಕರೆದರೂ ಹೆಂಡತಿ ಬರಲೊಪ್ಪದ ಕಾರಣವನ್ನೇ ನೆಪಮಾಡಿಕೊಂಡ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದುರಂತ ಸಮೀಪದ ಬೇವೂರು ಗ್ರಾಮದಲ್ಲಿ ನಡೆದಿದೆ.
ಜಗಲೂರು ತಾಲೂಕಿನ ಮುಷ್ಟೂರು ಗ್ರಾಮದ ಮಂಜುಲಿಂಗಪ್ಪ (28) ಮೃತ ದುರ್ದೈವಿ. ಮುಷ್ಟೂರಿನ ಮಂಜುಲಿಂಗಪ್ಪ ಎರಡು ವರ್ಷಗಳ ಹಿಂದೆ ಕೊಟ್ಟೂರು ಸಮೀಪದ ಬೇವೂರು ಗ್ರಾಮದ ನಾಗವೇಣಿಯನ್ನು ಮದುವೆಯಾಗಿದ್ದ. ಹೆರಿಗೆಗೆಂದು ನಾಗವೇಣಿ ತವರು ಗ್ರಾಮ ಬೇವೂರಿಗೆ ಬಂದು, ಈಗ್ಗೆ 2 ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮನೀಡಿದ್ದಳು. ಮಂಜುಲಿಂಗಪ್ಪ ಬೇವೂರಿಗೆ ಬುಧವಾರ ಬಂದು ಮಗು-ಪತ್ನಿ ಆರೋಗ್ಯ ವಿಚಾರಿಸಿ, ಮುಷ್ಟೂರಿಗೆ ಬರುವಂತೆ ನಾಗವೇಣಿಗೆ ಒತ್ತಾಯಿಸಿದ್ದಾನೆ. ಆಗ ಅತ್ತೆ ಗಿರಿಯಮ್ಮ ಆಕ್ಷೇಪಿಸಿ ಮುಷ್ಟೂರಿಗೆ ಕಳಿಸಲ್ಲ ಎಂದು ಮಂಜುಲಿಂಗಪ್ಪಗೆ ಖಡಾಖಂಡಿತವಾಗಿ ತಿಳಿಸಿದಳು. ಎಷ್ಟೇ ಕರೆದರೂ ಹೆಂಡತಿ ನಾಗವೇಣಿ ಬರುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಮಂಜುಲಿಂಗಪ್ಪ ಹೊರಕ್ಕೆ ತೆರಳಿ ತನಗೆ ಸಿಕ್ಕ ವಿಷ ಸೇವಿಸಿದ್ದಾನೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
ಮಂಜುಲಿಂಗಪ್ಪ ವಿಷ ಸೇವಿಸಲು ಆತನ ಹೆಂಡತಿ ನಾಗವೇಣಿ, ಅತ್ತೆ ಗಿರಿಯಮ್ಮ ಅವರ ಒತ್ತಾಸೆಯೇ ಕಾರಣ ಎಂದು ಆಪಾದಿಸಿ ಮೃತನ ಸಂಬಂಧಿಕರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿಷ ಜಂತು ಕಚ್ಚಿ ರೈತ ಸಾವು
ಕೊಟ್ಟೂರು: ಹೊಲದಲ್ಲಿ ಕಾರ್ಯನಿರ್ವಹಿಸಲು ತೆರಳಿದ್ದ ರೈತನಿಗೆ ವಿಷ ಜಂತು ಕಚ್ಚಿದ್ದರ ಪರಿಣಾಮ ಆತ ಮೃತಪಟ್ಟ ಘಟನೆ ಸಮೀಪದ ನಾಗರಕಟ್ಟೆ ಗ್ರಾಮದಲ್ಲಿ ನಡೆದಿದೆ. ಗೋಣೆಪ್ಪ (75) ಮೃತಪಟ್ಟ ದುರ್ದೈವಿ. ಕಿಳ್ಳೇಕಾತರ ಗೋಣೆಪ್ಪ ಹೊಲದಲ್ಲಿ ಗೊಬ್ಬರ ಹರಡುವ ಕಾರ್ಯದಲ್ಲಿ ಮಗ್ನವಾಗಿದ್ದಾಗ ಈ ಘಟನೆ ನಡೆದಿದ್ದು, ಕೂಡಲೇ ಆತನನ್ನು ಚಿಕಿತ್ಸೆಗೆ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಕೊಟ್ಟೂರು ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement