ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ: ಹೊರ ರಾಜ್ಯದ 48 ಕಾರ್ಮಿಕರ ರಕ್ಷಣೆ

Vishwanath S
Updated On : 12 Jun 2014, 11:22 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 11
ನಗರದ ಹೊರವಲಯದ ಗುಗ್ಗರಹಟ್ಟಿ ಪ್ರದೇಶದಲ್ಲಿನ ಭಾರತ್ ಫುಡ್ ಪ್ರಾಡೆಕ್ಟ್ಸ್ ಕಾರ್ಖಾನೆ ಮೇಲೆ ಕಾರ್ಮಿಕ ಅಧಿಕಾರಿಗಳು ಬುಧವಾರ ಸಂಜೆ ದಾಳಿ ನಡೆಸಿ 48ಕ್ಕೂ ಹೆಚ್ಚು 14 ವರ್ಷ ಮೇಲ್ಪಟ್ಟ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಕಾರ್ಖಾನೆಯಲ್ಲಿ ಬ್ರೆಡ್, ಕೇಕ್, ಬಿಸ್ಕತ್ ಮುಂತಾದ ಆಹಾರ ಉತ್ಪಾದನೆಗೆ ಹೊರ ರಾಜ್ಯಗಳಿಂದ ಯುವಕರನ್ನು ಕರೆ ತಂದು ಬಳಸಿಕೊಳ್ಳಲಾಗುತ್ತಿತ್ತು. ಇವರಿಗೆ ಸೂಕ್ತ ಸೌಲಭ್ಯ ನೀಡದೆ ಒಂದೇ ಕೋಣೆಯಲ್ಲಿ ಇರಿಸಿಕೊಂಡು, ಹಗಲು-ರಾತ್ರಿ ದುಡಿಸಿಕೊಳ್ಳುತ್ತಿದ್ದುದು ದಾಳಿ ವೇಳೆ ಬೆಳಕಿಗೆ ಬಂದಿದೆ.
ಕಾರ್ಮಿಕ ಅಧಿಕಾರಿ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ಒಡಿಶಾ ಕಾನೂನು ಪ್ರಾಧಿಕಾರದಿಂದ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಖಾನೆ ಮೇಲೆ ದಾಳಿ ನಡೆಸಲಾಯಿತು. ಹೊರ ರಾಜ್ಯದವರನ್ನು ಇಲ್ಲಿಗೆ ಕರೆತಂದಿರುವ ಕುರಿತು ಕಾರ್ಖಾನೆ ಮಾಲೀಕರು ಯಾವುದೇ ಮಾಹಿತಿ ನೀಡಿಲ್ಲ. ಇದು ನಿಯಮ ಉಲ್ಲಂಘನೆ. ಇಲ್ಲಿ ಉಳಿದುಕೊಳ್ಳುವ ಯಾವುದೇ ಪರಿಸರವಿಲ್ಲ. ಅಮಾನುಷವಾಗಿ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದುಹೇಳಿದರು.
ಪಶ್ಚಿಮ ಬಂಗಾಳದ ಯುವಕ ಬಾಷಾ (17) ಮಾತನಾಡಿ, ನಮಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಹಗಲು-ರಾತ್ರಿ ದುಡಿಸಿಕೊಳ್ಳಲಾಗುತ್ತದೆ. ಒಂದೇ ಕೋಣೆಯಲ್ಲಿ 8-10 ಜನರು ವಾಸ ಮಾಡಬೇಕು. ಬಡತನದಲ್ಲಿರುವ ನಾವು ಎಲ್ಲವನ್ನೂ ಸಹಿಸಿಕೊಂಡು ಇಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಮಿಕ ಕಾನೂನು ನಿಯಮ ಉಲ್ಲಂಘಿಸಿ 14 ವರ್ಷ ಮೇಲ್ಪಟ್ಟವರನ್ನು ಇಲ್ಲಿ ದುಡಿಸಿಕೊಳ್ಳುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಎಂ.ಎನ್ ಪಾಟೀಲ್ ತಿಳಿಸಿದರು. ದಾಳಿಯಲ್ಲಿ ರಕ್ಷಣೆ ಪಡೆದ ಯುವಕರನ್ನು ಠಾಣೆಗೆ ಕರೆದೊಯ್ದು ವೈದ್ಯರಿಂದ ವಯಸ್ಸು ಪರೀಕ್ಷೆ ಮಾಡಿಸಲಾಯಿತು. ಗ್ರಾಮೀಣ ಸಿಪಿಐ ಉಮೇಶ್ ನಾಯಕ್, ಪಿಎಸ್ಐ ಕೆ. ಹೊಸಕೇರಪ್ಪ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement