ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

Vishwanath S
Updated On : 14 Jun 2014, 11:49 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 13
ಜಿಲ್ಲಾ ಬಾಲ್‌ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಹಿರಿಯ ಆಟಗಾರ ಅಕುಲ್ ಸೂರ್ಯನಾರಾಯಣ ಜ್ಞಾಪಕಾರ್ಥ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ  ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ನಿವೃತ್ತ ಪ್ರಾಚಾರ್ಯ ವೆಂಕೋಬರಾವ್ ಪಂದ್ಯಾವಳಿ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಸೋಲು-ಗೆಲುವುಗಳನ್ನು ಲೆಕ್ಕಿಸದೆ ಮೊದಲು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದರು. ಕ್ರೀಡೆಗಳಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದಲ್ಲದೇ, ಆರೋಗ್ಯ ವೃದ್ಧಿಸಲಿದೆ. ಜತೆಗೆ ಏಕಾಗ್ರತೆ, ಕ್ರೀಡಾಸ್ಫೂರ್ತಿ ಬೆಳೆಯಲಿದೆ. ಆದ್ದರಿಂದ ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ತಿಳಿಸಿದರು. ಅನಂತರ ಅಕುಲ್ ಸೂರ್ಯನಾರಾಯಣರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಎರಡು ನಿಮಿಷಗಳ ಮೌನ ಆಚರಿಸಲಾಯಿತು. ರಾಜ್ಯದ ಬೆಂಗಳೂರು, ಮೈಸೂರು, ಮೂಡಬಿದಿರೆ, ಚಾಮರಾಜನಗರ, ತುಮಕೂರು, ಶಿಖಾರಿಪುರ, ಶಿವಮೊಗ್ಗ, ದಾವಣಗೆರೆ, ಭದ್ರಾವತಿ, ಹಾಸನ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ಇತರ ಜಿಲ್ಲೆಗಳಿಂದ ಒಟ್ಟು 16 ತಂಡಗಳು ಆಗಮಿಸಿವೆ. ಪಂದ್ಯಾವಳಿ ಮೂರು ದಿನಗಳು ನಡೆಯಲಿದ್ದು, ಶುಕ್ರವಾರ-ಶನಿವಾರ ಲೀಗ್ ಪಂದ್ಯಗಳು ನಡೆಯಲಿವೆ.
ಭಾನುವಾರ ನಾಕೌಟ್ ಆರಂಭವಾಗಲಿದೆ. ಫೈನಲ್ ಪಂದ್ಯ ಜರುಗಲಿದೆ ಎಂದು ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಸಾದ್ ತಿಳಿಸಿದರು. ಅಕುಲ್ ಗೋವಿಂದರಾಜುಲು, ಕೋಲಾಚಲಂ ಶಂಕರ್, ಚಂದ್ರಶೇಖರ್, ಪರ್ವೀಜ್, ಅಕುಲ್ ರವಿಕುಮಾರ್ ಸೇರಿದಂತೆ ವಿವಿಧ ತಂಡಗಳ ಕ್ರೀಡಾಪಟುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement