ಸುಮಗರಾರರ ಬದುಕು ದುರ್ಗಮ: ರಾಮಣ್ಣ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 17
ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಶ್ರಮಿಸಿದ ಐದು ಜಿಲ್ಲೆಗಳ 250 ಸುಗಮಗಾರರು ಈಗ ನಿರುದ್ಯೋಗಿಗಳಾಗಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆ ಸೌಲಭ್ಯ ಒದಗಿಸಲು ಸರ್ಕಾರ ಎನ್‌ಜಿಓ ಮೂಲಕ ಗುಲ್ಬರ್ಗಾ, ಬಳ್ಳಾರಿ, ಮಂಗಳೂರು, ಮೈಸೂರು, ಬೆಂಗಳೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕಾರ್ಮಿಕ ಸೇವಾ ಕೇಂದ್ರಗಳನ್ನು ಆರಂಭಿಸಿ, 2010ರಲ್ಲಿ ಸಮುದಾಯ ಸುಗಮಗಾರರನ್ನು ನೇಮಿಸಿತ್ತು. ಇನ್ನಾದರೂ ಸುಗಮಗಾರರಿಗೆ ನ್ಯಾಯ ಕೊಡಿಸುವ ಮೂಲಕ, ಕಾರ್ಮಿಕರಿಗೂ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಣ್ಣ ಆಗ್ರಹಿಸಿದ್ದಾರೆ.