ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ವೀರಾಂಜನೇಯ ಮೂರ್ತಿ ಪ್ರತಿಷ್ಠಾಪನೆ

Lingaraj Badiger
Updated On : 20 Jun 2014, 10:59 am

ಹೊಸಪೇಟೆ: ನಗರದ ಸಂಡೂರು ರಸ್ತೆಯ ವಾಲ್ಮೀಕಿ ಪ್ರೌಢಶಾಲೆಯ ಪಕ್ಕದಲ್ಲಿ ವೀರಾಂಜನೇಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರ ಉದ್ಘಾಟನೆ ಸಮಾರಂಭವು ಜೂ. 20ರಂದು ನಡೆಯಲಿದೆ.
ಜೂ. 20ರಂದು ಬೆಳಗ್ಗೆ ಮೆರವಣಿಗೆ ನಡೆಯಲಿದೆ. ಜೂ. 21ರಂದು ಗೋಪುರದ ಕಳಸಾರೋಹಣ ನಡೆಯಲಿದೆ. ದೇವರಕೊಳ್ಳದ ಜೋಗದ ತಾತ ದಿಗಂಬರ ರಾಜ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
 ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಕಾರ್ಯಕ್ರಮ ಉದ್ಘಾಟಿಸುವರು. ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜೆ.ಎನ್. ವೆಂಕೋಬಣ್ಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.  ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್, ಡಿವೈಎಸ್‌ಪಿ ಡಿ.ಡಿ. ಮಾಳಗಿ, ತಹಸೀಲ್ದಾರ್ ರಮೇಶ್ ಕೋನರಡ್ಡಿ, ಸಿಪಿಐ ಶ್ರೀಧರ ದೊಡ್ಡಿ, ನಗರಸಭೆ ಪೌರಾಯುಕ್ತ ಸೈಯದ್ ಮುನೀರ್, ಸಮಾಜ ಸೇವಕ ಷಾ ಭವರಲಾಲ ಜೈನ, ಪೂಕ್ ರಾಜ್, ಪಿ. ಪ್ರಭಾಕರ ರೆಡ್ಡಿ, ನಗರಸಭೆ ಸದಸ್ಯ ಗಿಂಜಿ ಮಂಜುನಾಥ, ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಆನಂದ್, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದ ಅಧ್ಯಕ್ಷ ಕಿಚಡಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾರಿಹಳ್ಳಿ ವೆಂಕಟೇಶ್, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಪಿ.ವಿ. ವೆಂಕಟೇಶ್, ಜಾಗ್ರತ ನಾಯಕ ಬಳಗದ ಅಧ್ಯಕ್ಷ ದೇವರಮನಿ ಶ್ರೀನಿವಾಸ, ಮ್ಯಾಸಕೇರಿ ಮುಖಂಡ ಕಂಬಾಲಿ ಸೋಮಪ್ಪ, ಉಕ್ಕಡಕೇರಿ ಮುಖಂಡ ನಾಣಿಕೇರಿ ಕನಕಪ್ಪ, ಚಿತ್ರಕೇರಿ ಮುಖಂಡ ಬಂಡೆ ರಂಗಪ್ಪ, ಬಾಣದಕೇರಿ ಮುಖಂಡ ಬಾಣದ ಬಸಪ್ಪ ಸಮಾರಂಭದಲ್ಲಿ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement