ಬಳ್ಳಾರಿ

ಊರೊಂದು, ಗ್ರಾಮ ಪಂಚಾಯಿತಿ ಎರಡು

ಹಗರಿಬೊಮ್ಮನಹಳ್ಳಿ: ಒಂದೇ ಊರು. ಆದರೆ, ಆಡಳಿತ ಮಾತ್ರ ಎರಡು ಗ್ರಾಮ ಪಂಚಾಯಿತಿಗಳದ್ದು.
ನಾಗರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಎರಡು ಗ್ರಾಪಂ ಕಚೇರಿಗಳಿಗೆ ಐದಾರು ದಶಕಗಳಿಂದ ಮುಳುಗಡೆ ಜನರ ತಪ್ಪದ ಅಲೆದಾಟ. ಇದು ತುಂಗಭದ್ರಾ ಜಲಾಶಯದಲ್ಲಿ ಸರ್ವಸ್ವವನ್ನು ಕಳೆದುಕೊಂಡಿರುವ ನಾರಾಯಣದೇವರಕೆರೆ (ನಾಣಿಕೆರಿ) ಮುಳುಗಡೆ ನಿವಾಸಿಗಳಿಗೆ ರಾಜ್ಯ ಸರ್ಕಾರ ನೀಡಿರುವ ದೊಡ್ಡ ಬಳುವಳಿ.
ನಾಣಿಕೆರಿ ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಡೆಗೊಂಡ ಮೇಲೆ ಅಲ್ಲಿನ ವಾಸಿಗಳಿಗೆ ಹಗರಿಬೊಮ್ಮನಹಳ್ಳಿ ಬಳಿ ಪುನರ್ ವಸತಿ ಕಲ್ಪಿಸಿದ ಸ್ಥಳ ರಾಮನಗರವಾಗಿ ಅಸ್ತಿತ್ವಕ್ಕೆ ಬಂತು. ಹಗರಿಬೊಮ್ಮನಹಳ್ಳಿಯ ಶೇ. 60 ಭೂಪ್ರದೇಶ, ಜನಸಂಖ್ಯೆಯನ್ನು ಹಾಗೂ ಆರ್ಥಿಕ ವಹಿವಾಟಿನ ಕೇಂದ್ರವಾಗಿರುವ ರಾಮನಗರ ಇಂದಿಗೂ ಕಂದಾಯ ಗ್ರಾಮವಲ್ಲ. ಅಲ್ಲದೆ ತಾಲೂಕಿನ ಚಿಂತ್ರಪಳ್ಳಿ ಹಾಗೂ ಕಡ್ಲಬಾಳು ಗ್ರಾಮ ಪಂಚಾಯಿತಿಗಳಿಗೆ ಈ ಪಟ್ಟಣವನ್ನು ಹರಿದು ಹಂಚಲಾಗಿದೆ. ಹೀಗಾಗಿ ಕಂದಾಯ ಸೇರಿದಂತೆ ಇತರೆ ಪ್ರತಿಯೊಂದು ದಾಖಲೆಗೂ  ಇಲ್ಲಿನ ವಾಸಿಗಳು ಎರಡು ಗ್ರಾಪಂಗಳಿಗೆ ಎಡತಾಕುವುದು ಅನಿವಾರ್ಯ.
ರಾಮನಗರದ ಶ್ರೀಮಾರುತಿ ರಸ್ತೆಯ ಬಲಭಾಗ ಚಿಂತ್ರಪಳ್ಳಿ ಗ್ರಾಪಂಗೆ ಸೇರಿದರೆ, ಎಡಭಾಗ ಕಡ್ಲಬಾಳುಗೆ ಸೇರಿದೆ. ಒಂದೇ ರಸ್ತೆಯಲ್ಲಿ ವಾಸಿಸುತ್ತಿದ್ದರೂ ಆಡಳಿತ ಮಾತ್ರ ಪ್ರತ್ಯೇಕ. ಹೀಗಾಗಿ ಚಿಂತ್ರಪಳ್ಳಿ ಗ್ರಾಪಂನ ಸಿಬ್ಬಂದಿ ಬಲ ಭಾಗದ ಚರಂಡಿ ಸ್ವಚ್ಛಗೊಳಿಸಿದರೆ ಎಡದಲ್ಲಿರುವರು ಕಡ್ಲಬಾಳು ಗ್ರಾಪಂ ಸಿಬ್ಬಂದಿ ಬರುವತನಕವೂ ಕಾಯಬೇಕು. ಹೀಗಾಗಿ ಸ್ವಚ್ಛತೆ ಈ ರಸ್ತೆಗೆ ಮರಿಚಿಕೆ.
ಚಿಂತ್ರಪಳ್ಳಿ ಗ್ರಾಪಂನಿಂದ ತುಂಗಭದ್ರಾ ನದಿಯಿಂದ ಶಾಶ್ವತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದರೂ ಪಕ್ಕದ ಬ್ಯಾಲಾಳು ಪ್ರದೇಶಕ್ಕೆ ಸೇರಿದ ರಾಮನಗರ ವಾರ್ಡ್-2ರ ಜನರಿಗೆ ಈ ನೀರು ಕುಡಿವ ಭಾಗ್ಯವಿಲ್ಲ. ಏಕೆಂದರೆ ಈ ವಾರ್ಡ್ ಕಡ್ಲಬಾಳು ಗ್ರಾಪಂಗೆ ಸೇರಿದೆ. ಈ ಮಧ್ಯೆ ಪ್ರಭಾವವುಳ್ಳವರು ಚಿಂತ್ರಪಳ್ಳಿ ಗ್ರಾಪಂ ಆಡಳಿತದಿಂದ ನೀರಿನ ಪೂರೈಕೆ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ.
 ಪಟ್ಟಣದ ಬಹುತೇಕ ವಾಣಿಜ್ಯ-ವಹಿವಾಟು ಸೇರಿದಂತೆ ಅರ್ಥಿಕ ವ್ಯವಹಾರವೆಲ್ಲ ರಾಮನಗರದಲ್ಲಿ ಕೇಂದ್ರಿಕೃತವಾಗಿದೆ. ಅಂಚೆ, ಪೊಲೀಸ್, ಜೆಸ್ಕಾಂ, ಆರೋಗ್ಯ, ವಾಣಿಜ್ಯ ತೆರಿಗೆ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು  ಹಾಗೂ ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ಕಚೇರಿ, ಸರ್ಕಾರಿ, ಖಾಸಗಿ ಪದವಿಪೂರ್ವ, ಪದವಿ ಕಾಲೇಜು, ತಾಂತ್ರಿಕ ವಿದ್ಯಾ ಸಂಸ್ಥೆಗಳು, ತಾಲೂಕು ಕ್ರೀಡಾಂಗಣ, ಸಿನಿಮಾಮಂದಿರ, ಪ್ರಮುಖ ದೇವಸ್ಥಾನಗಳು ಇಲ್ಲಿ ನೆಲೆಗೊಂಡಿವೆ. ಇನ್ನೂ ವಾರ್ಷಿಕ ಒಂದೂವರೆ ಕೋಟಿ ರುಪಾಯಿಯಷ್ಟು ಆದಾಯ ತರುವ ತಾಲೂಕಿನ ಆರ್ಥಿಕ ವ್ಯವಹಾರ ನಿರ್ಧರಿಸುವ ಎಪಿಎಂಸಿ ಇಲ್ಲಿದೆ. ಏನೇ ಇದ್ರು ಎರಡು ಗ್ರಾಪಂ ಆಡಳಿತ ಈ ಊರಿನ ಸಮಗ್ರ ಅಭಿವೃದ್ಧಿಗೆ ಅಡ್ಡಗಾಲು ಆಗಿ ಕಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!