ಜಿಗುಪ್ಸೆ: ಬಳ್ಳಾರಿ ವಿವಾಹಿತೆ ಆತ್ಮಹತ್ಯೆ
ಬಳ್ಳಾರಿ: ಜೀವನದಲ್ಲಿ ಜಿಗುಪ್ಸೆಗೊಂಡು ವಿವಾಹಿತೆಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೋಗಿರುವ ಘಟನೆ ನಗರದ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರವೀಣಾ (19) ಆತ್ಮಹತ್ಯೆ ಮಾಡಿಕೊಂಡವಳು. ಇವರು ಮೂಲತಃ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯವರಾಗಿದ್ದು, ಇವಳಿಗೆ ತನ್ನ ಸೋದರ ಮಾವನಿಗೆ ಕಳೆದ ನಾಲ್ಕು ತಿಂಗಳ ಹಿಂದೆ ವಿವಾಹ ಮಾಡಿ ಕೊಡಲಾಗಿತ್ತು. ಗಂಡ ಖಾಸಗಿ ಕಾರ್ಖಾನೆಯಲ್ಲಿ ಎಂಜಿನಿಯರಾಗಿ ಸೇವೆ ಸಲ್ಲಿಸಿದ್ದು, ಬೆಳಗ್ಗೆ ಹೋಗಿ ರಾತ್ರಿ ಬರುತ್ತಿದ್ದು, ಗಂಡ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ನೇಣು ಹಾಕಿಕೊಂಡಿದ್ದು, ಸಂಜೆ ಗಂಡ ಮನೆಗೆ ಬಂದಾಗ ಗೊತ್ತಾಗಿದೆ. ಈ ಕುರಿತಾಗಿ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.