ತಂದೆಯನ್ನು ಗೌರವದಿಂದ ನೋಡಿಕೊಳ್ಳಿ: ಶ್ರೀನಿ
ಹೊಸಪೇಟೆ: ಮಕ್ಕಳು ತಂದೆಯನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳಬೇಕೆಂದು ಇಲ್ಲಿನ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಶ್ರೀನಿವಾಸ ರಾವ್ ಹೇಳಿದರು. ನಗರದಲ್ಲಿ ಬುಧವಾರ ರೋಟರಿ ಕ್ಲಬ್‌ನಲ್ಲಿ ತಂದೆಯ ದಿನಾಚರಣಾ ಸಮಾರಂಭದಲ್ಲಿ ಮಾತನಾಡಿ, ತಂದೆಯಾದವರು ಹೆಚ್ಚಿನ ಸಮಯವನ್ನು ಮಕ್ಕಳ ಜೊತೆಗೆ ಇದ್ದರೆ ಅವರಿಗೆ ಒಳ್ಳೆಯ ನಾಗರಿಕರನ್ನಾಗಿ, ವಿದ್ಯಾವಂತರನ್ನಾಗಿ ಬೆಳೆಸಬಹುದು ಎಂದರು. ರೋಟರಿ ಕಾರ್ಯದರ್ಶಿ ಕೆ. ಸೈಯದ್ ಮೊಹಮ್ಮದ್ ಮಾತನಾಡಿದರು. ವೈದ್ಯ ಡಾ. ಮುನಿವಾಸುದೇವರಡ್ಡಿ ಮಾತನಾಡಿ, ತಂದೆಯ ದಿನಾಚರಣೆಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ ಎಂದರು. ಯು.ಆರ್. ರೆಹಮಾನ್ ಅವರು ಟಿಬಿ ಡ್ಯಾಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಎರಡು ಹೊಲಿಗೆ ಯಂತ್ರ ಉಚಿತವಾಗಿ ನೀಡಿದರು.