ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ಪಡೆಯಬೇಕು
ಕೊಟ್ಟೂರು: ಶಿಕ್ಷಣ ಕಲಿಕೆಯಲ್ಲಿ ಉಂಟಾಗುವ ತೊಂದರೆಗಳನ್ನು ಎದುರಿಸಿಯೂ ಅತ್ಯುತ್ತಮ ಶಿಕ್ಷಣ ಪಡೆಯುವತ್ತ ಬಾಲಕ, ಬಾಲಕಿಯರು ಮುಂದಾಗಬೇಕಿದೆ ಎಂದು ಕನ್ನಡ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶನಾಯ್ಕ ಕರೆ ನೀಡಿದರು. ಇಲ್ಲಿನ ಜೆಪಿ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ರು. 10 ಸಾವಿರ ದೇಣಿಗೆ ಕೊಡಮಾಡಿದ ಅವರು, ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಚನ್ನಬಸವನಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಸೋಡಾ ಗುರುಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಪ.ಪಂ. ಸದಸ್ಯೆ ಪಂಕಜಾ ತಿಪ್ಪೇಸ್ವಾಮಿ ವರ್ತಕ ಹರೀಶಗೌಡ, ಚಟ್ರಕಿ ಬಸವರಾಜ್ ಉಪಸ್ಥಿತರಿದ್ದರು.