ಹೊಲಿಗೆ ತರಬೇತಿಗೆ ಅರ್ಜಿ
ಬಳ್ಳಾರಿ: ಕೈಮಗ್ಗ ಮತ್ತು ಜವಳಿ ಇಲಾಖೆಯು ನೂತನ ಜವಳಿ ನೀತಿ 2013- 18 ಯೋಜನೆಯಡಿ 45 ದಿನಗಳ ಜೀನ್ಸ್ ಬಟ್ಟೆ ಹೊಲಿಗೆ (ಸೀವಿಂಗ್ ಮಷಿನ್ ಆಪರೇಟರ್) ತರಬೇತಿ ನೀಡಲು ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕನಿಷ್ಠ 5ನೇ ತರಗತಿವರೆಗೆ ವ್ಯಾಸಂಗ ಮಾಡಿರಬೇಕು. ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲಾಗುವುದು. ತರಬೇತಿ ನಂತರ ತಮ್ಮ ಸ್ವ-ಇಚ್ಛಾಶಕ್ತಿಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು, ವೇತನ ಉದ್ಯೋಗ ಪಡೆಯಲು ಬದ್ಧರಾಗಿರಬೇಕು. ಆಯಾ ತಾಲೂಕು ಪಂಚಾಯ್ತಿ ಕಚೇರಿ, ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ, ನೇಕಾರರ ಸಹಕಾರ ಸಂಘಗಳಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ ಮತ್ತಿತರ ಅಗತ್ಯ ದಾಖಲೆಗಳೊಂದಿಗೆ ಜೂ. 30ರೊಳಗಾಗಿ ಜಂಟಿ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಬಳ್ಳಾರಿ ಇವರಿಗೆ ಸಲ್ಲಿಸಬೇಕು. ಇಲಾಖೆಯಿಂದ ಈಗಾಗಲೇ ತರಬೇತಿ ಪಡೆದವರು ಅರ್ಜಿ ಸಲ್ಲಿಸುವಂತಿಲ್ಲ.