ಮಟ್ಟೂರು ಗೆಲುವು: ಕಾಂಗ್ರೆಸ್ ವಿಜಯೋತ್ಸವ
ಹಗರಿಬೊಮ್ಮನಹಳ್ಳಿ: ಈಶಾನ್ಯ ಶಿಕ್ಷಕರ ಕ್ಷೇತ್ರ ದಿಂದ ಆಯ್ಕೆಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ಗೆಲುವಿಗೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಮಟ್ಟೂರು ವಿಜಯಸಾಧಿಸಿರುವ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕೊಟ್ರೇಶ ನೆತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಪಕ್ಷದ ಮುಖಂಡರಾದ ಆರ್. ರಾಮನಗೌಡ್ರು, ಸೊನ್ನದಮಹೇಶ, ಭೋವಿಹುಲುಗಪ್ಪ, ಶಾಂತಪ್ಪ, ಪಿತ್ರಪ್ಪ, ಬುಡ್ಡಿಬಸವರಾಜ, ಕುರುಬರ ವೆಂಕಟೇಶ, ಹೆಚ್. ರಾಮಣ್ಣ, ಕೆಚ್ಚಿನಬಂಡಿ ದುರುಗಪ್ಪ, ಯಡ್ರಮ್ಮನಹಳ್ಳಿ ಮರಿಯಪ್ಪ, ಶಬೀರ್ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.