ಬಳ್ಳಾರಿ

ಬೀದಿ ದೀಪ ನಿರ್ವಹಣೆಗೆ ಮರು ಟೆಂಡರ್

ಹೂವಿನಹಡಗಲಿ: ನಿಯಮ ಮೀರಿದ ವಸತಿ ವಿನ್ಯಾಸ, ಚರಂಡಿ ಮೇಲಿನ ಕಟ್ಟಡ ತೆರವು, ಬೀದಿ ದೀಪ ನಿರ್ವಹಣೆ ಮರು ಟೆಂಡರ್, ಮಟನ್ ಮಾರುಕಟ್ಟೆ ಸ್ಥಳಾಂತರ, ಸಂತೆ ಮಾರುಕಟ್ಟೆ, ಅಕ್ರಮ ಗುಡಿಸಲು ತೆರವು, ಖಾಲಿ ನಿವೇಶನ ಸ್ವಚ್ಛತೆ, ಸಂಚಾರಿ ಶೌಚ ಅಳವಡಿಸಲು ಪುರಸಭೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಇಲ್ಲಿನ ಪುರಸಭೆಯ ಎಂ.ಪಿ. ಪ್ರಕಾಶ್ ಸಭಾಂಗಣದಲ್ಲಿ ಸೋಮವಾರ ಕೋಡಿಹಳ್ಳಿ ಸಣ್ಣಕೊಟ್ರೇಶ ಅಧ್ಯಕ್ಷತೆಯಲ್ಲಿ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ  ಹಲವು ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣದಲ್ಲಿ 38 ಕಡೆ ಕಾನೂನು ಬಾಹಿರ ಲೇಔಟ್‌ಗಳಿವೆ. ಲೇಔಟ್ ಮಾಲೀಕರು ಮತ್ತು ಪುರಸಭೆ ಎರಡು ಕಡೆಯಿಂದ ತಪ್ಪಾಗಿದೆ. 1972 ರಿಂದ ಈವರೆಗೂ ಅಭಿವೃದ್ಧಿ ಶುಲ್ಕವನ್ನು ಹಳೆ ದರದಲ್ಲೇ ಪಾವತಿಸಿದ್ದಾರೆ. ಇದಕ್ಕೆ ಸಭೆ ನಿರ್ಣಯಗೊಳ್ಳಬೇಕೆಂದು ಮುಖ್ಯಾಧಿಕಾರಿ ನೂರುಲ್ಲಾ ಖಾನ್ ಸಭೆ ಮಾಹಿತಿ ನೀಡಿದರು.
ಜು. 28, 2011ರಂದು ಪುರಸಭೆ ಹೊಸ ದರ ನಿರ್ಣಯ ಮಾಡಿದೆ. ಇನ್ನು ಜಾರಿಯಾಗಿಲ್ಲ. ವಸತಿ ವಿನ್ಯಾಸವಿಲ್ಲ, ಅಭಿವೃದ್ಧಿಯೂ ಇಲ್ಲ. ಅಲ್ಲಿ ವಾಸವಾಗಿರುವ ಜನರು ಕುಡಿವ ನೀರು, ಚರಂಡಿ. ರಸ್ತೆ ನಿರ್ಮಾಣ ಮಾಡುವಂತೆ ಪುರಸಭೆಗೆ ದುಂಬಾಲು ಬಿದ್ದಿದ್ದಾರೆಂದು ನೂರುಲ್ಲಾ ಖಾನ್ ತಿಳಿಸಿದಾಗ, ಲೇಔಟ್ ಸಮಸ್ಯೆಯನ್ನು ಸರ್ವ ಸದಸ್ಯರು ಮುಂದಿನ ಸಭೆಗೆ ಮುಂದೂಡಿದರು.
ಸಂತೆ ಮಾರುಕಟ್ಟೆ ಜಾಗದಲ್ಲಿ ಅಕ್ರಮ ಗುಡಿಸಲುಗಳನ್ನು ಸಂಪೂರ್ಣ ತೆರವುಗೊಳಿಸಿ, ಪಟ್ಟಣದ ಮಟನ್ ಮಾರಾಟ ವ್ಯವಸ್ಥೆಯನ್ನು ಸಂತೆ ಮಾರುಕಟ್ಟೆಯ ಸ್ಥಳದಲ್ಲಿ ನಿರ್ಮಿಸಬೇಕು. ಪಟ್ಟಣದ ಎಲ್ಲ ಬಡಾವಣೆಗಳಲ್ಲಿನ ರಸ್ತೆ ಮತ್ತು ಚರಂಡಿಗಳ ಮೇಲೆ ಕಟ್ಟಡ, ಕಟ್ಟೆಗಳನ್ನು ಶೀಘ್ರದಲ್ಲೆ ತೆರವುಗೊಳಿಸಬೇಕೆಂದು ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.
ಬೀದಿ ದೀಪಗಳ ನಿರ್ವಹಣೆಗೆ ಟೆಂಡರ್ ಪಡೆದ ಗುತ್ತಿಗೆದಾರ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅವರ ಬಾಕಿ ಹಣ ಪಾವತಿ ಮಾಡದೇ, ಗುತ್ತಿಗೆ ರದ್ದು ಪಡಿಸಿ ಮರು ಟೆಂಡರ್ ಮಾಡಬೇಕು ಎಂದು ಮಂಜುನಾಥ ಜೈನ್, ವಜ್ರನಾಭಿ ಬಣಕಾರ ಸೇರಿ ಇತರೆ ಸದಸ್ಯರು ಒತ್ತಾಯಕ್ಕೆ, ಹಳೆ ಟೆಂಡರ್ ರದ್ದು ಪಡಿಸಿ ಕೂಡಲೇ ಟೆಂಡರ್ ಕರೆಯುತ್ತೇವೆ, ಸಮರ್ಪಕವಾಗಿ ನಿರ್ವಹಣೆ ಮಾಡುತ್ತೇವೆಂದು ಮುಖ್ಯಾಧಿಕಾರಿ ಹೇಳಿದರು.
ಪಟ್ಟಣ ಮುಖ್ಯ ರಸ್ತೆ, ದೇವಸ್ಥಾನ, ಮಸೀದಿ ಸೇರಿದಂತೆ ಅನೇಕ ಕಡೆಗಳಲ್ಲಿ ಮಟನ್ ಮಾರುಕಟ್ಟೆಗಳಿವೆ. ಇದರಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಮತ್ತು ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳನ್ನು ಸ್ಥಳಾಂತರಿಸಬೇಕೆಂದು ವಿಲ್ಸನ್‌ಸ್ವಾಮಿ, ರವಿ ಬಾರಿಕೇರ, ಸುರೇಶ ಒತ್ತಾಯಿಸಿದರು.
ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಶೌಚಾಲಯ ಪಕ್ಕದಲ್ಲಿ ಮಟನ್ ಮಾರುಕಟ್ಟೆ ಸ್ಥಳಾಂತರ ಮಾಡುತ್ತೇವೆ. ನಿಗದಿ ಪಡಿಸಿದ ಸ್ಥಳದಲ್ಲೇ ಮಟನ್ ಮಾರಾಟ ಮಾಡಬೇಕು. ಇದಕ್ಕೆ ನ್ಯಾಯಾಲಯ ತೀರ್ಪು ನೀಡಿದೆ. ಆದೇಶ ಪಾಲನೆ ಮಾಡಬೇಕಾಗಿದ್ದು, ಸ್ಥಳಾಂತರ ಮಾಡುತ್ತೇವೆಂದು ಅಧ್ಯಕ್ಷ ಸಣ್ಣ ಕೊಟ್ರೇಶ ಹೇಳಿದರು.
ಪಟ್ಟಣದ ಅನೇಕ ಕಡೆಗಳಲ್ಲಿ ನೂರಾರು ಖಾಲಿ ನಿವೇಶನಗಳಲ್ಲಿ ಮುಳ್ಳುಕಂಟಿ ಬೆಳೆದಿದೆ. ಇದರಿಂದ ಸಾಂಕ್ರಾಮಿಕ ರೋಗ, ವಿಷ ಜಂತು ಮತ್ತು ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ. ಆದರಿಂದ ಖಾಲಿ ನಿವೇಶನ ಮಾಲೀಕರು ಕೂಡಲೇ ಸ್ವಚ್ಛಗೊಳಿಸದಿದ್ದರೆ ಕಾನೂನು ಪ್ರಕಾರ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಒಳ ಚರಂಡಿ ಕಾಮಗಾರಿ ಮತ್ತು 2ನೇ ಹಂತದ ಕುಡಿವ ನೀರಿನ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ರಸ್ತೆಗಳನ್ನು ಕಿತ್ತು ಹಾಕಿ ಓಡಾಡಲು ಆಗದ ಸ್ಥಿತಿ ಇದೆ. ಲೇಔಟ್ ಆಗದೇ ಇರುವ ನಿವೇಶನಗಳಲ್ಲಿ ಒಳ ಚರಂಡಿ ಇಲ್ಲ. ಕಾಮಗಾರಿ ಕಳಪೆ, ಕಡಿಮೆ ಕೆಲಸಕ್ಕೆ ಹೆಚ್ಚು ಹಣ ಬಿಲ್ ಪಾವತಿ ಮಾಡಿದ್ದೀರಿ ಎಂದು ವಜ್ರನಾಭಿ ಬಣಕಾರ, ಮಂಜುನಾಥ ಜೈನ್, ಹನುಮಂತಪ್ಪ, ಸಂತೋಷ ಜೈನ್ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಯೋಜನೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ  ಉಪಾಧ್ಯಕ್ಷೆ ದುರುಗಮ್ಮ, ಮುಖ್ಯಾಧಿಕಾರಿ ನೂರುಲ್ಲಾ ಖಾನ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!