ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಳೆ ರಾಮಕೃಷ್ಣ ಪರಮಹಂಸರ ಜಯಂತಿ ಕಾರ್ಯಕ್ರಮ

Vishwanath S
Updated On : 2 Mar 2014, 11:43 am

ಹೊಸಪೇಟೆ: ನಗರದ ಬಳ್ಳಾರಿ ರಸ್ತೆಯಲ್ಲಿನ ರಾಮಕೃಷ್ಣ ಗೀತಾಶ್ರಮದಲ್ಲಿ ರಾಮಕೃಷ್ಣ ಪರಮಹಂಸರ 179ನೇ ಜಯಂತಿ ಮಾ. 3ರಂದು ನಡೆಯಲಿದೆ. ಅಂದು ಬೆಳಗ್ಗೆ 6.30ಕ್ಕೆ ಉಷ ಕೀರ್ತನೆ ಕಾರ್ಯಕ್ರಮ, 8.30ಕ್ಕೆ ವಿಶೇಷ ಪೂಜೆ, 9.30ಕ್ಕೆ ವಿಷ್ಣುಸಹಸ್ರನಾಮ ಪಾರಾಯಣ, 10ಕ್ಕೆ ಹೋಮ ಮತ್ತು ವೇದ ಘೋಷ ಕಾರ್ಯಕ್ರಮ ಜರುಗುವುದು. ಸಂಜೆ 6 ಗಂಟೆಗೆ ರಾಮಕೃಷ್ಣ ಪರಮಹಂಸರ 179ನೇ ಜಯಂತಿ ಸಮಾರಂಭದಲ್ಲಿ ಬೆಂಗಳೂರಿನ ರಾಮಕೃಷ್ಣ ಯೋಗಾಶ್ರವುದ ಸ್ವಾಮಿ ಯೋಗೇಶ್ವರಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವರು. ಜಮಖಂಡಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಗದಾಧರಾನಂದಜಿ ಮಹಾರಾಜ್ ಪೂಜೆ ಮತ್ತು ಹೋಮ ನೆರವೇರಿಸುವರು.
ಸ್ವಾಮಿ ಸುಮೇಧಾನಂದ, ಗಣಿ ಉದ್ಯಮಿ ಎಚ್.ಆರ್. ರಂಗನಗೌಡ, ಹೋಟೆಲ್ ಉದ್ಯಮಿ ಕಮಲಾಕ್ಷ ಶಾನಭಾಗ, ಗುತ್ತಿಗೆದಾರ ಕೆ. ಸದಾಶಿವ ರೆಡ್ಡಿ, ಉದ್ಯಮಿ ಕಟ್ಟಾ ಮೋಹನ್, ಕವಿತಾ ಈಶ್ವರ್ ಸಿಂಗ್, ಉತ್ತರ ಕರ್ನಾಟಕ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಭವರಲಾಲ್ ಆರ್ಯ, ಪಿ.ಎನ್. ಶ್ರೀಪಾದ, ಶ್ರೀನಿವಾಸ, ಗಣಪತಿ ಕೊಳಗದ್, ವೈ. ಶ್ರೀನಿವಾಸರಾವ್, ವೀರಾಂಜನೇಯ, ಲಿಂಗಣ್ಣ ಕೋರಿಶೆಟ್ಟರ್, ಡಾ. ಮಹಾಬಲೇಶ್ವರ ರೆಡ್ಡಿ, ಬಾಬುಲಾಲ್ ಜೈನ್, ಪಾಂಡುರಂಗಶೆಟ್ಟಿ, ಬೋಡಾ ರಾಮಪ್ಪ, ಭವರಲಾಲ್ ಜೈನ್, ಶ್ಯಾಮ್ ಚೌಧರಿ, ವೆಂಕೋಬ್ ಶೆಟ್ಟಿ ಪೆಂಡಕೂರ್, ರತನ್ ಚಂದ್, ಪ್ರಭಾಕರ ಗೋಪಿ, ಸತೀಶ್ ಗೋಪಿ, ಸುಬ್ರಾಯ ಹೆಗಡೆ, ಬಸವರಾಜ್ ನಾಲತವಾಡ್, ಪಿ.ಎನ್. ಸದಾಶಿವ, ಬಾಲಚಂದ್ರ ಶರ್ಮ, ಭೂಪಾಲ್ ರಾಘವೇಂದ್ರ ಶೆಟ್ಟಿ, ಡಾ.ಪಿ.ಡಿ. ವಿನಾಯಕ್, ರಘುಪತಿ, ಕೆ.ಬಿ. ಶ್ರೀನಿವಾಸ ರೆಡ್ಡಿ, ಪಂತರ್ ಜಯಂತ್, ಶಂಕರರಾವ್ ಅಳವಂಡಿಕರ್, ಶ್ರೀಪಾದ ಪೂಜಾರ್, ಶ್ರೀಕಾಂತ, ಡಿ. ಹನುಮಂತಪ್ಪ, ಚಿನ್ನಿ ರಾಮಕುಮಾರ್, ಶಂಕರ ಪೆಂಡಕೂರ್, ಕಾಕುಬಾಳು ಸೀತಾರಾಮ ಶೆಟ್ಟಿ, ಅಪ್ಪಣ್ಣ ಮತ್ತು ವೆಂಕಪ್ಪ ಸೇರಿದಂತೆ ಇತರರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement