ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪೇದೆ ಸಾವು: ಆರ್ಥಿಕ ನೆರವು ನೀಡಿದ ಪೊಲೀಸ್ ಸಿಬ್ಬಂದಿ

Mainashree
Updated On : 4 Mar 2014, 9:53 am

ಬಳ್ಳಾರಿ: ಕರ್ತವ್ಯದಲ್ಲಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟ ಡಿಎಆರ್ ಪೊಲೀಸ್ ಪೇದೆ ಪಿ. ರಾಮಸ್ವಾಮಿ ಕುಟುಂಬಕ್ಕೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಮ್ಮ ವೇತನದಿಂದ ರು. 50,500 ಸಹಾಯಧನ ನೀಡಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಗಳು ಸೋಮವಾರ ಸಂಜೆ ರಾಮಸ್ವಾಮಿ ಮನೆಗೆ ತೆರಳಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಸಹಾಯಧನ ನೀಡಿದ್ದಾರೆ.
ಪಿ. ರಾಮಸ್ವಾಮಿ 23 ವರ್ಷಗಳಿಂದ ಡಿಎಆರ್ ಪೊಲೀಸ್ ಪೇದೆಯಾಗಿದ್ದು, ಜ. 17ರಂದು ಕಂಪ್ಲಿ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೃತ ಪಟ್ಟಿದ್ದ. ಈತನಿಗೆ ಪತ್ನಿ, ಮಂಜುನಾಥ್ ಮತ್ತು ನರಸಿಂಹ ಎಂಬ ಪುತ್ರರಿದ್ದಾರೆ. ನೊಂದ ಕುಟುಂಬಕ್ಕೆ ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಇನ್‌ಸ್ಪೆಕ್ಟರ್ ಉಮೇಶ್ ಈಶ್ವರ ನಾಯಕ್, ಸಬ್ ಇನ್‌ಸ್ಪೆಕ್ಟರ್ ಹೊಸಕೇರಪ್ಪ, ಷಣ್ಮುಖ, ಎಎಸ್‌ಐ ಹಾಗೂ ಸಿಬ್ಬಂದಿ ಪೊಲೀಸ್ ಪೇದೆ ಕುಟುಂಬಕ್ಕೆ ನೆರವಾಗಿದ್ದಾರೆ.
ಈ ಸಂದರ್ಭದಲ್ಲಿ ಡಿಎಸ್‌ಆರ್ ಡಿವೈಎಸ್ಪಿ ಶ್ರೀನಿವಾಸ್ ಯಾದವ್, ಇನ್‌ಸ್ಪೆಕ್ಟರ್‌ಗಳಾದ ಉಮೇಶ್ ಈಶ್ವರ ನಾಯಕ್, ಡಿಎಆರ್ ಇನ್‌ಸ್ಪೆಕ್ಟರ್ ಪ್ರಕಾಶ್, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಹೊಸಕೇರಪ್ಪ ಹಾಗೂ ಸಿಬ್ಬಂದಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement