ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವೇಳೆ ಬದಲಿಗೆ 4 ತಿಂಗಳು ಕಾಯಬೇಕು

Mainashree
Updated On : 6 Mar 2014, 10:47 am

ಕೊಟ್ಟೂರು: ಕೊಟ್ಟೂರು-ಹರಿಹರ ರೈಲು ಓಡಾಟವನ್ನು ಕಾಣಲು 19 ವರ್ಷ ಕಾಯಬೇಕಾದ ಕೊಟ್ಟೂರಿಗರು ಇದೀಗ ಓಡಾಟದ ಅವಧಿ ಬದಲಾವಣೆಗೆ ಇನ್ನು ನಾಲ್ಕು ತಿಂಗಳು ವಿಧಿ ಇಲ್ಲದೆ ಕಾಯಬೇಕಿದೆ. ದಿನಂಪ್ರತಿ ಬೆಳಗ್ಗೆ 8.30ಕ್ಕೆ ಹರಿಹರ ಬಿಟ್ಟು 9ಕ್ಕೆ ಅಮರಾವತಿ, 9.55ಕ್ಕೆ ತೆಲಗಿ, ಹರಪನಹಳ್ಳಿ 10.30ಕ್ಕೆ, ಬೆಣ್ಣಿಹಳ್ಳಿಗೆ 11.15ಕ್ಕೆ, ಕೊಟ್ಟೂರಿಗೆ 12.10ಕ್ಕೆ ತಲುಪುವ ವೇಳಾ ಪಟ್ಟಿಯನ್ನು ರೇಲ್ವೆ ಅಧಿಕಾರಿಗಳು ನಿಗದಿಪಡಿಸಿದ್ದಾರೆ. ಇದರಂತೆ ಕೊಟ್ಟೂರಿನಿಂದ ಮಧ್ಯಾಹ್ನ 12.45ಕ್ಕೆ ಬಿಟ್ಟು 1.25ಕ್ಕೆ ಬೆಣ್ಣಿಹಳ್ಳಿ, 2.10ಕ್ಕೆ ಹರಪನಹಳ್ಳಿ, 2.50ಕ್ಕೆ ತೆಲಗಿ, 3.55ಕ್ಕೆ ಅಮರಾವತಿ, 4.30ಕ್ಕೆ ಹರಿಹರಕ್ಕೆ ವಾಪಾಸ್ ತೆರಳುವ ಅವಧಿ ಕೂಡ ಈಗಾಗಲೆ ಅಧಿಕೃತವಾಗಿ ನಿರ್ಧರಿಸಿ ಸಂಚಾರ ಆರಂಭವಾಗಿದೆ. ಆದರೆ ಈ ರೈಲನ್ನು ಕೊಟ್ಟೂರಿನಿಂದ ಬೆಳಗ್ಗೆ 8ಕ್ಕೆ ಬಿಟ್ಟು ಹರಿಹರಕ್ಕೆ 11.30ಕ್ಕೆ ತಲುಪುವಂತೆ ಮಾಡಿಕೊಡಬೇಕು. ಈ ಕುರಿತು ಕೂಡಲೇ ರೇಲ್ವೆ ಸಚಿವರು ಆದೇಶ ಹೊರಡಿಸಬೇಕು ಎಂದು ಹರಿಹರದ ಶಾಸಕ ಎಚ್.ಎಸ್.  ಶಿವಶಂಕರ್ ಸೋಮವಾರದ ಸಮಾರಂಭದಲ್ಲಿ ಒತ್ತಾಯಿಸಿದ್ದರು. ಶಾಸಕರ ಒತ್ತಾಯಕ್ಕೆ ಸ್ಪಂದಿಸಿದ್ದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ವೇಳಾ ಅವಧಿಯನ್ನು ತಕ್ಷಣದಿಂದ ಜಾರಿಗೆ ತರುವಂತೆ ಕ್ರಮ ಕೈಗೊಳ್ಳುವೆ ಎಂದು ಖಚಿತ ಭರವಸೆ ನೀಡಿದ್ದರು. ಮಂಗಳವಾರ ಸಿಬ್ಬಂದಿಯನ್ನು ವೇಳೆ ಬದಲಾವಣೆ ಕುರಿತು ಪ್ರಶ್ನಿಸಿದಾಗ, ಯಾವುದೆ ಕಾರಣಕ್ಕೂ ಈಗಿನ ರೈಲು ಓಡಾಟದ ವೇಳಾಪಟ್ಟಿಯಲ್ಲಿ ಖಂಡಿತ ಬದಲಾವಣೆ ಮಾಡಲು ಸಾಧ್ಯವೆ ಇಲ್ಲ. ಬದಲಾವಣೆ ಮಾಡಬೇಕಿದ್ದರೆ ಜುಲೈ ತಿಂಗಳವರೆಗೆ ಕಾಯಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement