ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಾಲುವೆಗೆ ನೀರು ಪೂರೈಕೆಗೆ ಆಗ್ರಹ

Mainashree
Updated On : 7 Mar 2014, 10:31 am

ಕುರುಗೋಡು: ಪಟ್ಟಣಕ್ಕೆ ಸಮೀಪದ ಹಾವಿನಹಾಳು, ಚನ್ನಪಟ್ಟಣ, ಎಚ್. ವೀರಾಪುರ, ರುದ್ರಪಾದ, ಮುದ್ದಟ್ಟನೂರು ಹಾಗೂ ಎಮ್ಮಿಗನೂರು ಗ್ರಾಮದ ರೈತರು ನಡುವಿ ನಂ.7 ವಿತರಣಾ ಕಾಲುವೆಗೆ ಸಮರ್ಪಕ ನೀರು ಬಿಡುವಂತೆ ಆಗ್ರಹಿಸಿ ನೀರಾವರಿ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಬಿ. ನಾಗರಾಜ್ ಮಾತನಾಡಿ, ಈ ಕಾಲುವೆ ವ್ಯಾಪ್ತಿಯ ರೈತರ ಜಮೀನಿಗೆ ಬೇಸಿಗೆ ನೀರು ತಲುಪುತ್ತಿಲ್ಲ. ಒಂದೆಡೆ ಅಕ್ರಮ ನೀರು ಬಳಕೆದಾರರ ತೊಂದರೆ, ಇನ್ನೊಂದೆಡೆ ಆಂಧ್ರ ನೀರಾವರಿ ಸ್ಕ್ವಾಡ್ ದಾಳಿ ನಡುವೆ ಅಧಿಕೃತ ನೀರು ಬಳಕೆದಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ವಿಷಯ ತಿಳಿದಿದ್ದರೂ ಕುರುಗೋಡು ನೀರಾವರಿ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಅರೋಪಿಸಿದರು. ಈ ಕಾಲುವೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೆಳದಂಡೆ ಕಾಲುವೆ ವ್ಯಾಪ್ತಿಗೆ ಸೇರಿದೆ. ಈ ವರ್ಷ ಬೇಸಿಗೆಯ ನೀರು ಮಾರ್ಚ್ ಕೊನೆವರೆಗೆ ನೀಡುವುದಾಗಿ ತುಂಗಭದ್ರಾ ಮಂಡಳಿ ತಿಳಿಸಿತ್ತು. ಆದರೆ ಸಮರ್ಪಕ ನೀರಿಲ್ಲದ ಕಾರಣ ಕಾಲುವೆಯ 9 ಕಿ.ಮೀ. ವ್ಯಾಪ್ತಿಯ 6 ಗ್ರಾಮದ ಸಹಸ್ರಾರು ಎಕರೆ ಜಮೀನಿನ ಬೆಳೆ ಒಣಗುತ್ತಿದೆ. ಇದಕ್ಕೆ ನೀರಾವರಿ ಇಲಾಖೆ ಅಧಿಕಾರಿ ತೋರಿದ ಅಸಡ್ಡೆ ಕಾರಣ ಎಂದು ದೂರಿದರು.
ಈ ಕಾಲುವೆ ವ್ಯಾಪ್ತಿಯ ಸಹಸ್ರಾರು ಎಕರೆಯಲ್ಲಿ 6 ಗ್ರಾಮದ ರೈತರ ಜಮೀನಿನಲ್ಲಿ ಹತ್ತಿ, ಜೋಳ, ಸಜ್ಜೆ, ಸೂರ್ಯಕಾಂತಿ ಮತ್ತು ಬತ್ತದ ಬೆಳೆ ಹಂಗಾಮಿನ ಹಂತದಲ್ಲಿದೆ. ಸಮರ್ಪಕ ನೀರಿಲ್ಲದೆ ಒಣಗಲು ಪ್ರಾರಂಭಿಸಿದೆ. ಎಕರೆಗೆ ಸಾವಿರಾರು ರು. ವೆಚ್ಚ ಮಾಡಿದ ರೈತ ಕಂಗಾಲಾಗಿದ್ದಾನೆ. ಈ ನಷ್ಟದ ಹೊರೆ ನೀರಾವರಿ ಇಲಾಖೆ ಇಲ್ಲವೆ, ಸರ್ಕಾರ ಭರಿಸಬೇಕು ಎಂದು ರೈತರು ಅಗ್ರಹಿಸಿದರು. ಎಚ್. ಮಲ್ಲಿಕಾರ್ಜುನ, ದೊಡ್ಡನಗೌಡ, ಹೊಸಳ್ಳಿ ಬೀಳಿ ಬಾಯಪ್ಪ, ಮಾರೆಪ್ಪ, ವೈ. ರಾಮು, ಎಸ್. ಮುದಕಪ್ಪ, ರವೀಂದ್ರನಾಥ್, ನಾಗರಾಜ್, ಮಂಜಯ್ಯ, ಏಟೂರು ಹನುಮಯ್ಯ, 6 ಗ್ರಾಮದ ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement