ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶೇಂಗಾಕ್ಕೆ ಬೆಂಬೆಲೆ ನೀಡಿ: ಪ್ರತಿಭಟನೆ

Rashmi Kasaragodu
Updated On : 8 Mar 2014, 12:14 pm

ಯಲಬುರ್ಗಾ: ಶೇಂಗಾ ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಂ.ಬಿ. ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಕನಕದಾಸ ವೃತ್ತದಿಂದ ಮೆರವಣಿಗೆ ಮಾಡಿದ ಪ್ರತಿಭಟನಾಕಾರರು, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಂಘದ ಮುಖಂಡ ರಾಶೀದ್ ಖಾಜಿ ಪ್ರತಿಭಟನೆ ನೇತೃತ್ವ ವಹಿಸಿ, ತಾಲೂಕಿನಲ್ಲಿ 3000ಕ್ಕೂ ಹೆಚ್ಚು ರೈತರು ಶೇಂಗಾ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ಆತಂಕದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ನಾಗರಾಜ ಮಾತನಾಡಿ, ಒಂದು ಎಕರೆಯಲ್ಲಿ ಶೇಂಗಾ ಬೆಳೆಯಲು ರು. 7 ಸಾವಿರ ಖರ್ಚಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಶೇಂಗಾಕ್ಕೆ ರು. 3ರಿಂದ 4 ಸಾವಿರ ಧಾರಣೆ ಇದೆ. ಇದು ಅವೈಜ್ಞಾನಿಕ. ಕ್ವಿಂಟಲ್ಗೆ ಕನಿಷ್ಠ ಆರೇಳು ಸಾವಿರ ಬೆಲೆ ಘೋಷಿಸಿ, ರೈತರ ಹಿತ ಕಾಪಾಡಬೇಕು. ಡಾ೤ ಸ್ವಾಮಿನಾಥನ್ ಆಯೋಗದ ಸಲಹೆಯಂತೆ ಬೆಲೆ ನೀಡಬೇಕು. ಇದಕ್ಕೆ ಸರ್ಕಾರ ಹಿಂದೇಟು ಹಾಕಿದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಹಳ್ಳಿಕೇರಿ, ಯಮನಪ್ಪ, ದಾನಪ್ಪ, ಹನುಮಂತಪ್ಪ, ಅಂದಪ್ಪ, ರಾಘಣ್ಣ, ದೇವಪ್ಪ, ಶರಣಪ್ಪ, ದುರುಗಪ್ಪ, ನಾಗಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement