ಬಳ್ಳಾರಿ: ದಾಸೋಹ ಮಂಟಪ ಕಾಮಗಾರಿಗೆ ಚಾಲನೆ
ಬಳ್ಳಾರಿ: ನಗರದ ಮಿಲ್ಲರ್ಪೇಟೆ ಪ್ರದೇಶದಲ್ಲಿರುವ ಕಮ್ಮರಚೇಡು ಶ್ರೀ ಕಲ್ಯಾಣ ಸಂಸ್ಥಾನ ಮಠದ ಅವರಣದಲ್ಲಿ ದಾಸೋಹ ಮಂಟಪ ಹಾಗೂ ಕಲ್ಯಾಣ ಮಂಟಪದ ನಿರ್ಮಾಣ ಕಾಮಗಾರಿಗೆ ಈಚೆಗೆ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಭೂಮಿ ಪೂಜೆ ನೆರವೇರಿಸುವುದರೊಂದಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಸ್ವಾಮೀಜಿ ಹಾಗೂ ಪಾಲಿಕೆ ಸದ್ಯಸರಾದ ಫರ್ವಿನ್ ಬಾನು, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಗುತ್ತಿಗೆನೂರು ವಿರೂಪಾಕ್ಷಗೌಡ, ಎಪಿಎಂಸಿ ನಾಮನಿರ್ದೇಶಕ ಸಿಲಾರ್ಬಾಷಾ, ಅನಿಲ್ಕುಮಾರ್ ಮತ್ತಿತರರು ಇದ್ದರು.