ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಂಧ, ಅನಾಥರ ಸೇವೆಯೇ ದೇವರ ಸೇವೆ

Lingaraj Badiger
Updated On : 11 Mar 2014, 12:02 pm

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಮಾ. 10
ಅಂಗವಿಕಲ, ಅನಾಥ, ಬುದ್ಧಿಮಾಂದ್ಯರ ಸೇವೆ ದೇವರ ಸೇವೆಗೆ ಸಮಾನವಾದುದು. ಇಂತಹ ಸಮಾಜಮುಖಿ ಕೆಲಸಗಳು ಎಸ್‌ವಿಆರ್ ಚಾರಿಟೆಬಲ್ ಟ್ರಸ್ಟ್‌ನಿಂದ ನಿರಂತರವಾಗಿ ನಡೆಯಲಿ ಎಂದು ಧಾರವಾಡದ ಸಲಹಾ ತಜ್ಞ ಡಾ. ಜ್ಯೋತಿ ಪಾಲಾಕ್ಷಿ ಕರೆ ನೀಡಿದರು.
ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಎಸ್‌ವಿಆರ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಬದುಕಿನಲ್ಲಿ ನೊಂದ ಜೀವಗಳಿಗೆ ಧಾನ ಧರ್ಮ ಮಾಡುವ ಕೈಗಳು ಯಾವಾಗಲೂ ಶ್ರೇಷ್ಠವಾಗುತ್ತವೆ. ಆಗ ದೇವರ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಹೆಸರಿಗೆ ಮಾತ್ರ ಟ್ರಸ್ಟ್‌ಗಳಾಗದೇ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.
ಸಾಮಾಜಿಕ ಕೆಲಸಗಳನ್ನು ಮಾಡುವಾಗ ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಸಮಾಜದ ಕಟ್ಟೆ ಕಡೆಯ ಜನರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವಾಗಲಿ. ನೊಂದವರಿಗೆ ನೆರವು ನೀಡಿ ಎಂದು ಸಲಹೆ ನೀಡಿದರು.
ರಾಘವೇಂದ್ರ ರಾಯ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ನೊಂದ ಅಂಧ, ಅನಾಥ, ಅಂಗವಿಕಲರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಎಸ್‌ವಿಆರ್ ಟ್ರಸ್ಟ್ ಆರಂಭಿಸಲಾಗಿದೆ. ಜೀವನದಲ್ಲಿ ಎಷ್ಟೇ ಶ್ರೀಮಂತರಾದರೂ ಅದು ತನ್ನೊಬ್ಬನ ಸ್ವಾರ್ಥಕ್ಕೆ ಮಾತ್ರ ಬಳಕೆಯಾಗುತ್ತದೆ. ಅಂತಹ ಸ್ವಾರ್ಥತೆಯನ್ನು ಬಿಟ್ಟು ದುಡಿಮೆಯಿಂದ ಬಂದ ಹಣದಲ್ಲಿ ದಾನ, ಧರ್ಮಗಳನ್ನು ತಮ್ಮ ತಂದೆ ತಾಯಿ ಹೆಸರಿನಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಶಿವಮೊಗ್ಗದ ಉಪನ್ಯಾಸಕ ಪ್ರದೀಪ್ ಕೆಲಗಾರ, ಎಚ್.ಎಂ. ಬೆಟ್ಟಯ್ಯ ಮತ್ತಿತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ 19 ಅಂಗವಿಕಲ, ಬುದ್ದಿಮಾಂದ್ಯ ಮಕ್ಕಳಿಗೆ ತಲಾ ಒಂದು ಸಸಿ ಹಾಗೂ ಧನ ಸಹಾಯ ವಿತರಿಸಿದರು.
ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕರಾದ ಉಮಾ, ಹೇಮಲತಾ, ನಿವೃತ್ತ ಶಿಕ್ಷಕ ಎಚ್.ಎಂ. ಬೆಟ್ಟಯ್ಯ, ಹಿಂದಿ ಪಂಡಿತ ವಿರೂಪಾಕ್ಷಪ್ಪ, ಜಕಣಚಾರಿ ಪ್ರಶಸ್ತಿ ಪುರಸ್ಕೃತ ಹಂಸನಂದಚಾರ್, ಡಾ. ಜ್ಯೋತಿ ಪಾಲಾಕ್ಷಿ, ಡಾ. ಸುಭಾಶ್ಚಂದ್ರ, ಎಫ್.ಡಿ. ಕಾಲ್ವಾಡಿ ಮಠ ಅವರನ್ನು ಸನ್ಮಾನಿಸಿದರು.
ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಫ್.ಸಿ. ಕಾಲ್ವಾಡಿಮಠ, ಡಾ. ಶಿವಕುಮಾರ್ ಎಸ್. ಬೆಲ್ಲದ, ಡಾ. ಸುಭಾಶ್ಚಂದ್ರ, ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಸತೀಶ ಶೇಜವಾಡ್ಕರ್, ಸುಂದರಿಬಾಯಿ, ವಿಠ್ಠಲಪ್ಪ ರಾಯ್ಕರ್ ಉಪಸ್ಥಿತರಿದ್ದರು.
ಪಿ.ವರ್ಷಾ ಪ್ರಾರ್ಥಿಸಿದರು. ದ್ವಾರಕೀಶ ರೆಡ್ಡಿ ನಿರೂಪಿಸಿದರು. ರಾಘವೇಂದ್ರ ರಾಯ್ಕರ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement