ಪಂಚಮಸಾಲಿ ನೌಕರರ ಸಂಘಕ್ಕೆ ಆಯ್ಕೆ
ಹೂವಿನಹಡಗಲಿ: ತಾಲೂಕು ವೀರಶೈವ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಚಂದ್ರಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಬಸೆಟ್ಟಿ ಪ್ರಕಾಶ್, ಉಪಾಧ್ಯಕ್ಷ ವಿ.ಬಿ. ಜಗದೀಶ, ವೈ. ಉದಯಕುಮಾರ್, ಪ್ರಕಾಶ ಐಗೋಳ, ಎಚ್. ಬಸವನಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ ಉಂಡಾಡಿ, ಖಜಾಂಚಿ ಕನ್ನಿಹಳ್ಳಿ ಮಲ್ಲಣ್ಣ, ಸಹ ಕಾರ್ಯದರ್ಶಿ ಸೊಪ್ಪಿನ ಮುತ್ತುರಾಜ, ಮಲ್ಲಣ್ಣ ಗೂರನವರ, ಸಂಘಟನಾ ಕಾರ್ಯದರ್ಶಿ ಎಚ್. ಪ್ರಕಾಶ, ಬಸವರಾಜ ಮಾಗಳ, ಹೊಂಬಾಳಿ ಕೊಟ್ರೇಶ, ಸವಿತಾ ಅಟವಾಳಗಿ, ನಿರ್ದೇಶಕರಾಗಿ ವೀರಣ್ಣ ಸೊಪ್ಪಿನ, ಶಿವಪ್ರಕಾಶ ನೀಲಗುಂದ, ಬಸವರಾಜ ಸುಂಕದ, ನಂಜುಂಡಿ, ಜಿ. ಶಿವಕುಮಾರ್, ಡಾ. ಬಸವರಾಜ ಹೆಬ್ಬಾಳ, ಜಿ. ಮಲ್ಲಣ್ಣ, ಸರೋಜಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು. ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ರವಿ ಉತ್ತಂಗಿ ಮಾತನಾಡಿ, ನೌಕರರು ಸಂಘಟಿತರಾಗಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯ ಸಂಘದಿಂದ ಸೌಹಾರ್ದ ಪತ್ತಿನ ಸಹಕಾರ ಸಂಘ ಪ್ರಾರಂಭಿಸಲು ಯೋಜಿಸಿರುವುದಾಗಿ ತಿಳಿಸಿದರು. ಜಿಲ್ಲಾ ಅಧ್ಯಕ್ಷ ಎಚ್.ಜಿ. ಪಾಟೀಲ ಮಾತನಾಡಿ, ಸಮಾಜದ ನೌಕರರು ಸಂಘಟಿಸಲು ಗ್ರಾಮವಾರು ಗಣತಿ ಕಾರ್ಯ ಕೈಗೊಳ್ಳಬೇಕಿದೆ ಎಂದರು. ಜಿಲ್ಲಾ ಉಪಾಧ್ಯಕ್ಷ ಎ. ಕೊಟ್ರಗೌಡ, ವೀರೇಶ, ಕಾರ್ಯದರ್ಶಿ ವೀರನಗೌಡ, ಪರಶೆಟ್ಟಿ ಮಲ್ಲಣ್ಣ, ಟಿ.ಪಿ. ವೀರೇಂದ್ರ, ಎಂ. ಕೊಟ್ರೇಶ ಇದ್ದರು. ಹನುಮಂತಪ್ಪ ಪ್ರಾರ್ಥಿಸಿದರು. ಎಚ್. ಕೊಟ್ರೇಶ ಸ್ವಾಗತಿಸಿದರು. ಬಸೆಟ್ಟಿ ಪ್ರಕಾಶ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಸೆಟ್ಟಿ ಜಯಪ್ರಕಾಶ ವರದಿ ವಾಚಿಸಿದರು.