452 ವಿದ್ಯಾರ್ಥಿಗಳು ಪಿಯು ಪರೀಕ್ಷೆಗೆ ಗೈರು
ಹೊಸಪೇಟೆ: ದ್ವಿತೀಯ ಪಿಯುಸಿ ಪರೀಕ್ಷೆಗಳು ಬುಧವಾರದಿಂದ ಆರಂಭಗೊಂಡಿದ್ದು, ತಾಲೂಕಿನ 5 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆಯಲ್ಲಿ 5,768 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಎಲ್ಲ 5 ಕೇಂದ್ರಗಳಲ್ಲಿ 6,220 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, ಅದರಲ್ಲಿ 452 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದು, 5,768 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಹೊಸಪೇಟೆ ವಿಜಯನಗರ ಕಾಲೇಜ್ ಕೇಂದ್ರದಲ್ಲಿ 131 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಗೈರಾಗಿದ್ದರೆ, 120 ವಿದ್ಯಾರ್ಥಿಗಳು ರಾಜಶಾಸ್ತ್ರ, ಸಂಖ್ಯಾಶಾಸ್ತ್ರದಲ್ಲಿ 84 ನೋಂದಣಿಯಾಗಿದ್ದು, ಒಬ್ಬರು ಗೈರಾಗಿದ್ದರು. ಚಿತ್ತವಾಡ್ಗಿ ಸರ್ಕಾರಿ ಪಪೂ ಕಾಲೇಜಿನಲ್ಲಿ 270 ವಿದ್ಯಾರ್ಥಿಗಳು ನೋಂದಾವಣಿಯಾಗಿದ್ದು, 21 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸರ್ಕಾರಿ ಬಾಲಕಿಯರ ಪಪೂ ಕಾಲೇಜ್ ಕೇಂದ್ರದಲ್ಲಿ 267 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, ಇದರಲ್ಲಿ 12 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ವ್ಯಾಸನಕೆರೆಯ ವ್ಯಾಸಪುರಿ ಸಂಯುಕ್ತ ಪಪೂ ಕಾಲೇಜ್ ಕೇಂದ್ರದಲ್ಲಿ 142 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 6 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಂಪ್ಲಿಯ ಸರ್ಕಾರಿ ಪಪೂ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ 224 ವಿದ್ಯಾರ್ಥಿಗಳು ನೋಂದಣಿಯಾಗಿ 15 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.