ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ
ಕೂಡ್ಲಿಗಿ: ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯವಿದ್ದು ಹಿರಿಯ, ಕಿರಿಯ ಎನ್ನುವ ಭೇದ ಭಾವ ಮಾಡುವುದಿಲ್ಲ. ಹೀಗಾಗಿಯೆ ಕಾಂಗ್ರೆಸ್ ತನ್ನದೆ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಅವರು ಪಟ್ಟಣದಲ್ಲಿ ಕೂಡ್ಲಿಗಿ ಮತ್ತು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಭಾರತ ನಿರ್ಮಾಣ ಯಾತ್ರೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಅಧಿಕಾರ ನಡೆಸಿದ್ದ ಕಾಂಗ್ರೆಸ್‌ನ ಹಿರಿಯರಾದ ಎಂ.ವೈ. ಘೋರ್ಪಡೆ ಮತ್ತು ಎಂ.ಪಿ. ಪ್ರಕಾಶ್ ಜನಸಾಮಾನ್ಯರಿಗೆ ಅತ್ಯಂತ ಹತ್ತಿರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಹಣ ಬಲ ಮತ್ತು ದರ್ಪದಿಂದ ಅಧಿಕಾರ ಮಾಡಿದವರು ಜನರ ಬಳಿ ಹೊಗಲಿಲ್ಲ, ಹೆಚ್ಚು ಕಾಲ ಉಳಿಯಲಿಲ್ಲ ಎಂದು ಬಿಜೆಪಿ ಮತ್ತು ರೆಡ್ದಿಗಳ ರಾಜಕೀಯ ಕಾರ್ಯವೈಖರಿ ಟೀಕಿಸಿದರು.
ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಕೂಡ್ಲಿಗಿ ತಾಲೂಕಿಗೆ ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಯಡಿ ಮೊದಲ ಹಂತದಲ್ಲಿ ರು. 130 ಕೋಟಿ ಮತ್ತು ರು. 131 ಕೋಟಿ ಎರಡನೇ ಹಂತದಲ್ಲಿ ಹಣ ಬಿಡುಗಡೆ ಮಾಡಿದ್ದು, ಉದ್ಘಾಟನೆ ನಡೆಯಬೇಕಾಗಿತ್ತು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣೆ ಬಳಿಕ ಯೋಜನೆಗೆ ಚಾಲನೆ ನೀಡಿ, ಬರುವ ವಿಧಾನಸಭಾ ಚುನಾವಣೆ ವೇಳೆಗೆ ಇಡೀ ತಾಲೂಕಿಗೆ ತುಂಗಭದ್ರಾ ನದಿಯ ಶುದ್ಧ ನೀರು ನೀಡುವುದಾಗಿ ಹೇಳಿದರು.
ಕ್ಷೇತ್ರಾಭಿವೃದ್ಧಿ: ಕಾರ್ಯಕ್ರಮ ಉದ್ಘಾಟಿಸಿದ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ಮಾತನಾಡಿ, ಕಾಂಗ್ರೆಸ್ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರೂ ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿಲ್ಲ. ಅದ್ದರಿಂದ ಬ್ಲಾಕ್, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಶಾಸಕರಿಲ್ಲದೆ ಕೂಡ್ಲಿಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದ್ದಾರೆ ಎಂದು ತಿಳಿಸಿದರು.
ಸಂಡೂರು ಶಾಸಕ ಈ. ತುಕಾರಾಂ, ಬಳ್ಳಾರಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಮಾತನಾಡಿದರು. ಮಾಜಿ ಸಚಿವ ಎನ್.ಎಂ. ನಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನರಸಿಂಹಗಿರಿ ವೆಂಕಟೇಶ್, ಕಮಲಾ ಮರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮರಿಯಪ್ಪ, ಎನ್. ಮುದ್ದಪ್ಪ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಗಳಿ ಮಂಜುನಾಥ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರೇಶ್‌ಬಾಬು, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಗುರುಪ್ರಸಾದ್, ಉದಯ ಜನ್ನು, ಮರಿಯಪ್ಪ, ತಾಪಂ ಉಪಾಧ್ಯಕ್ಷ ಮಹೇಶ್, ಸದಸ್ಯ ಹೇಮಣ್ಣ, ಗುಂಡುಮುಣುಗು ತಿಪ್ಪೇಸ್ವಾಮಿ, ಕೃಷ್ಣನಾಯ್ಕ, ಹಿರೇಕುಂಬಳಗುಂಟೆ ಉಮೇಶ್, ಎಂ. ಗುರುಸಿದ್ದನಗೌಡ, ಸಿ.ಬಿ. ಜಯರಾಂ ನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ರಾಘವೇಂದ್ರ, ಮಾದೇಹಳ್ಳಿ ನಜೀರ್‌ಸಾಬ್, ಪಪಂ ಸದಸ್ಯ ನೂರ್‌ಅಹ್ಮದ್, ಟಿ. ವೆಂಕಟೇಶ್, ಕಾವಲ್ಲಿ ಶಿವಪ್ಪ ನಾಯಕ, ಸೋಮಪ್ಪ ನಾಯಕ, ಬಾಷಾಸಾಬ್, ಮಲ್ಲಾಪುರ ಭರಮಣ್ಣ ಉಪಸ್ಥಿತರಿದ್ದರು.