ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಟ್ಟೂರು: ನಾಳೆಯಿಂದ ಎನ್ನೆಸ್ಸೆಸ್ ವಿಶೇಷ ಶಿಬಿರ

Lingaraj Badiger
Updated On : 14 Mar 2014, 11:19 am

ಕೊಟ್ಟೂರು: ಇಲ್ಲಿನ ಕೊಟ್ಟೂರೇಶ್ವರ ಪದವಿ ಕಾಲೇಜಿನ ಎನ್ನೆಸ್ಸೆಸ್ ಎ, ಬಿ ಘಟಕಗಳಿಂದ ವಿಶೇಷ ಸೇವಾ ಶಿಬಿರ ಸಮೀಪದ ಬೇವೂರು, ಅಂಬಳಿ ಗ್ರಾಮಗಳಲ್ಲಿ ಮಾರ್ಚ್ 15ರಿಂದ 21ರ ವರೆಗೆ ಆಯೋಜಿಸಲಾಗಿದೆ.
ಈ ಗ್ರಾಮಗಳ ದೇವಾಲಯಗಳು, ಶಾಲೆ ಸ್ವಚ್ಛತೆ, ಚರಂಡಿ, ರಸ್ತೆಗಳ ದುರಸ್ತಿ, ಏಡ್ಸ್ ಕುರಿತು ಜಾಗೃತಿ, ಪರಿಸರ ಪ್ರಜ್ಞೆ, ನೀರು, ವಿದ್ಯುತ್ ಸದ್ಬಳಕೆ ಬಗ್ಗೆ ತಿಳಿವಳಿಕೆ, ನಾಯಕತ್ವ-ವ್ಯಕ್ತಿತ್ವ ವಿಕಸನದ ತರಬೇತಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು, ವಿಶೇಷ ಉಪನ್ಯಾಸಕ ಕಾರ್ಯಕ್ರಮಗಳು ಮತ್ತು ರಕ್ತದಾನದ ಮಹತ್ವದ ಬಗ್ಗೆ ಕಾರ್ಯಕ್ರಮ ಶಿಬಿರದುದ್ದಕ್ಕೂ ನಡೆಯುತ್ತವೆ ಎಂದು ಶಿಬಿರದ ಅಧಿಕಾರಿಗಳಾದ ಪ್ರೊ.ಬಿ. ಬಸವರಾಜ್, ಎಸ್. ವಾಮದೇವಪ್ಪ ತಿಳಿಸಿದರು.
ಮಾ. 15ರಂದು ಬೇವೂರಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಶಿಬಿರ ಉದ್ಘಾಟಿಸುವರು. ಮಾ. 21ರಂದು ಸಮಾರೋಪದ ಸಮಾರಂಭದಲ್ಲಿ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಚಾನುಕೋಟಿ ಮಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳಲ್ಲಿದ್ದಾರೆ. ಆರು ದಿನಗಳ ನಡೆಯುವ ವಿಶೇಷ ಶಿಬಿರದ ಪ್ರತಿ ದಿನದ ಕಾರ್ಯಕ್ರಮಗಳಲ್ಲಿ ಹಲವು ಬಗೆಯ ಗಣ್ಯರು, ಉಪನ್ಯಾಸಕರು, ವಿಶೇಷ ತಜ್ಞರು ಪಾಲ್ಗೊಂಡು ಶಿಬಿರಾರ್ಥಿಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement